ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿರಿ

ಪ್ರಾಕೃತಿಕ ವಿಕೋಪಕ್ಕೆ ಸಂಬAಧಿಸಿದAತೆ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಪಿ. ಕಲಾವತಿ, ಡಾ. ಮಂತರ್ ಗೌಡ, ಎಸ್.ಜೆ. ಸೋಮಶೇಖರ್, ಆನಂದ್ ಪ್ರಕಾಶ್ ಮೀನಾ, ಅಭಿಷೇಕ್ ಇದ್ದರು.
ಪ್ರಾಕೃತಿಕ ವಿಕೋಪಕ್ಕೆ ಸಂಬAಧಿಸಿದAತೆ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಪಿ. ಕಲಾವತಿ, ಡಾ. ಮಂತರ್ ಗೌಡ, ಎಸ್.ಜೆ. ಸೋಮಶೇಖರ್, ಆನಂದ್ ಪ್ರಕಾಶ್ ಮೀನಾ, ಅಭಿಷೇಕ್ ಇದ್ದರು.
Published on
ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಎಲ್ಲೂ ದೊಡ್ಡ ಮಟ್ಟದ ಹಾನಿ ಆಗಿಲ್ಲ. ಮುಂಬರುವ ದಿನಗಳಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿರಬೇಕು ಎಂದು ಸೂಚಿಸಿರುವುದಾಗಿ ಜಿಲ್ಲಾ ಪ್ರಾಕೃತಿಕ ವಿಪತ್ತು ಉಸ್ತುವಾರಿಯಾದ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು. ಪ್ರಾಕೃತಿಕ ವಿಕೋಪಕ್ಕೆ ಸಂಬAಧಿಸಿದAತೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಜಿಲ್ಲೆಯ ಕೆಲವು ಕಡೆ ಭೇಟಿ ನೀಡಿ ಬಹಳಷ್ಟು ವಿಷಯಗಳನ್ನು ಸೂಕ್ಷö್ಮವಾಗಿ ಗಮನಿಸಲಾಗಿದೆ. ಮಳೆಯಿಂದಾದ ಹಾನಿ, ಬೆಳೆ ಹಾನಿ, ಜನ-ಜಾನುವಾರುಗಳಿಗೆ ತೊಂದರೆ, ವಸತಿ ಸಮಸ್ಯೆ, ಭೂಕುಸಿತ ಮತ್ತಿತರ ವಿಷಯಗಳಿಗೆ ಸಂಬAಧಿಸಿದAತೆ ಸಂಬAಧಿಸಿದ ಇಲಾಖೆಗಳಿಂದ ಸೂಕ್ತ ವರದಿ ಪಡೆಯಲಾಗುವುದು. ಇಲ್ಲಿಗೆ ಬಂದAತಹ ಉದ್ದೇಶಕ್ಕೆ ಸೀಮಿತವಾಗಿ ಪ್ರಕೃತಿ ವಿಕೋಪವಾಗಿದೆಯೋ, ಇಲ್ಲವೋ ಅಥವಾ ಬರ ಬಂದಿದೆಯೋ, ರೈತರಿಗೆ ಏನು ಸಮಸ್ಯೆಯಾಗಿದೆ ಎನ್ನುವ ಬಗ್ಗೆ ಜಿಲ್ಲಾಡಳಿತದಿಂದ ಪಡೆದ ವರದಿಯನ್ನು ಸರ್ಕಾರಕ್ಕೆ ಕೊಡಲಾಗುವುದು. ಸಭೆಯ ವೇಳೆ ಇಲ್ಲಿ ಕೆಲವು ಜಡ ಮನಸ್ಸಿನ ಅಧಿಕಾರಿಗಳನ್ನು ಗಮನಿಸಲಾಗಿದೆ. ಅದನ್ನು ನಮ್ಮ ಹಂತದಲ್ಲಿ ಏನೇನು ಮಾತಾಡಬೇಕು ? ಯಾರಿಗೆ ಆ ವಿಚಾರ ತಲುಪಿಸಬೇಕು ಅದನ್ನು ಮಾಡಲಾಗುವುದು.
ಇಲಾಖೆಗಳಿವೆ, ಅಧಿಕಾರಿಗಳಿದ್ದಾರೆ. ಅವರು ಏನೇನು ವಾಸ್ತವಾಂಶದ ವರದಿಯನ್ನು ಸಲ್ಲಿಸಬೇಕೋ ಅದನ್ನು ಜವಾಬ್ದಾರಿಯಿಂದ ಸಲ್ಲಿಸುತ್ತಾರೆ. ಅದರಲ್ಲಿ ಏನಾದರೂ ಲೋಪವಾದರೆ ಸರ್ಕಾರ ಅದರ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕೋ ನಿರ್ದಾಕ್ಷಿಣ್ಯವಾಗಿ ತೆಗೊಳ್ಳುತ್ತದೆ ಎಂದರು.
ಇದಕ್ಕೂ ಮೊದಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊಡಗು, ವಯನಾಡು ಭಾಗದಲ್ಲಿ ಬೀಳುವ ಮಳೆ ರಾಜ್ಯದ ಅರ್ಧ ಭಾಗಕ್ಕೆ ಆಧಾರ. ಇಲ್ಲಿಯ ಬೆಳೆಗಳಿಗೂ ಮಳೆ ಬೇಕು. ಕಾಫಿ, ಕರಿಮೆಣಸು ಬೆಳೆ ಮೇಲೆ ಕಡಿಮೆ ಮಳೆಯಿಂದಾಗಿ ಪರಿಣಾಮ ಆಗಿದೆ. ಕಾಫಿ ಬೆಳೆಗಾರರಲ್ಲೂ ಆತಂಕ ಮನೆ ಮಾಡಿದೆ. ಭತ್ತ ಬಿತ್ತನೆ, ಮುಸುಕಿನ ಜೋಳ ತೆನೆ ಕಟ್ಟದ ಸ್ಥಿತಿ ಇದೆ. ಸಂಪರ್ಕ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಅನುದಾನದ ಕೊರತೆ ಇದೆ. ಹೆಚ್ಚು ಮಳೆಯೂ ಇಲ್ಲ, ಕೊರತೆಯೂ ಆಗಿಲ್ಲದ ಸ್ಥಿತಿ ಇದೆ. ಹಾಗಾಗಿ ಎನ್‌ಡಿಆರ್‌ಎಫ್ ಹತ್ರ ಅನುದಾನ ಕೇಳುವ ಸ್ಥಿತಿಯಲ್ಲಿ ಇಲ್ಲ. ರಾಜ್ಯ ಸರ್ಕಾರವೇ ಅನುದಾನ ಭರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ವರದಿ ತಯಾರಿಸಿ ಸಲ್ಲಿಸಬೇಕು.
ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುವಂತೆ ಜಿಲ್ಲಾಧಿಕಾರಿ ಸೂಚಿಸಬೇಕು. ಕಾಳಜಿ ಕೇಂದ್ರ ಸುಸ್ಥಿಯಲ್ಲಿ ಇರಬೇಕು. ಅಗತ್ಯ ವಿಷಯಗಳ ಬಗ್ಗೆ ಸಾರ್ವಜನಿಕರು, ರೈತರಿಗೆ ಸಕಾಲದಲ್ಲಿ ಸಂಬAಧಿಸಿದವರು ಮಾಹಿತಿ ಕೊಡಬೇಕು. ಇಲ್ಲಿಯ ತನಕ ಯಾವುದೇ ದೊಡ್ಡ ಅನಾಹುತ ಆಗಿಲ್ಲ. ಆದರೂ ಅದಷ್ಟು ಎಚ್ಚರಿಕೆಯಿಂದ ಇರಬೇಕು. ಆಯಾಯಾ ಇಲಾಖೆಯ ಅಗತ್ಯತೆಗಳ ಬಗ್ಗೆ ಅಧಿಕಾರಿಗಳು ವರದಿಯಲ್ಲಿ ಪ್ರಸ್ತಾಪ ಮಾಡಬೇಕು. ಜಿಲ್ಲೆಯಲ್ಲಿ ಬರದ ಛಾಯೆ ಇಲ್ಲ. ಮಳೆಯ ಕೊರತೆ ಆಗಿರುವುದು ಕಂಡುಬAದಿದೆ ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಸಮಾಧಾನ ಲೋಕೋಪಯೋಗಿ ಇಲಾಖೆ ಕಾರ್ಯವೈಖರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ, ಆದರೆ ನಾವೇ ರಸ್ತೆ ಗುಂಡಿಗಳನ್ನು ತಪ್ಪಿಸಿಕೊಂಡು ಸಭೆಗೆ ಬಂದಿದ್ದೇವೆ. ರಸ್ತೆಗಳ ದುರಸ್ತಿಗೆ 35 ಕೋಟಿ ರೂ. ಅಗತ್ಯವಿದ್ದು, ಕೇವಲ 9 ಕೋಟಿ ರೂ. ಬಿಡುಗಡೆಯಾಗಿದೆ. ಬಂದಿರುವ ಅಲ್ಪ ಅನುದಾನದಲ್ಲೂ ಸರಿಯಾಗಿ ಕೆಲಸ ನಡೆಯುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾಹಿತಿ ನೀಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.37 ರಷ್ಟು ಮಳೆ ಕಡಿಮೆಯಾಗಿದೆ. 16 ಹೋಬಳಿಗಳ ಪೈಕಿ ಕೇವಲ 3 ಹೋಬಳಿಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಳೆದ 10 ದಿನಗಳಿಂದ ಮಳೆ ಚುರುಕಾಗಿದ್ದು, ಹಾರಂಗಿ ಜಲಾಶಯ ಭರ್ತಿಯಾಗಲು ಇನ್ನು ಕೇವಲ 2 ಅಡಿ ಬಾಕಿ ಇದೆ. ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ ಈ ವರ್ಷ ಜಿಲ್ಲೆಯಲ್ಲಿ ಶೇ. 8ರಷ್ಟು ಮಾತ್ರ ಭತ್ತದ ನಾಟಿ ಕಾರ್ಯ ಆಗಿದೆ. ಕಳೆದ ವರ್ಷ ಈ ವೇಳೆಗೆ ಶೇ. 35ರಷ್ಟು ನಾಟಿ ಕೆಲಸ ಮುಗಿದಿತ್ತು. ಈ ಮೊದಲೆಲ್ಲಾ ಸಾಮಾನ್ಯವಾಗಿ ವರ್ಷಕ್ಕೆ 300-350 ಮಂದಿ ಮಾತ್ರ ಬೆಳೆ ವಿಮೆ ನೋಂದಣಿ ಮಾಡುತ್ತಿದ್ದರು. ಈ ವರ್ಷ ಇಲ್ಲಿಯ ತನಕ 653 ರೈತರು ವಿಮಾ ನೋಂದಣಿ ಮಾಡಿಸಿದ್ದಾರೆ. ಒಟ್ಟು 1 ಸಾವಿರ ರೈತರನ್ನು ವಿಮಾ ವ್ಯಾಪ್ತಿಗೆ ತರುವ ಗುರಿ ಇದೆ ಎಂದರು.
ತೋಟಗಾರಿಕೆ, ಪಶುಸಂಗೋಪನೆ, ಶಾಲಾ ಶಿಕ್ಷಣ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬAಧಿಸಿದ ಮಾಹಿತಿ ನೀಡಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಡಿಎಸಿಎಫ್ ಅಭಿಷೇಕ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಕುಶಾಲನಗರದ ಯುಜಿಡಿ ಕಾಮಗಾರಿ ವಿಳಂಬದ ವಿಷಯ ಈ ಸಭೆಯಲ್ಲೂ ಪ್ರಸ್ತಾಪ ಆಯಿತು. ಕುಶಾಲನಗರ ಗಣಪತಿ ದೇವಾಲಯ ಎದುರು ಕಳೆದ 2 ತಿಂಗಳಿನಿAದ ರಸ್ತೆ ಅಗೆಯಲಾಗುತ್ತಿದೆ. ಇನ್ನೂ ಅಲ್ಲಿ ಕೆಲಸ ಮುಂದುವರಿದಿದೆ. ಅಲ್ಲೇನು ನಿಮಗೆ ಚಿನ್ನ ಸಿಗುತ್ತಿದೆಯಾ ಎಂದು ಶಾಸಕ ಡಾ. ಮಂತರ್ ಗೌಡ ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಂಡಳಿಯ ಎಇಇ ಅವರ ವಯಸ್ಸು ಪ್ರಶ್ನಿಸಿದ ಮಂತರ್ ಗೌಡ, ನೀವು ನಿವೃತ್ತರಾದರೂ ಅಲ್ಲಿ ಯುಜಿಡಿ ಕೆಲಸ ಮುಗಿಸುವುದಿಲ್ಲ ಎಂದು ಲೇವಡಿ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ವಿ.ಪಿ. ಶಶಿಧರ್ 2012ರಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿದೆ. ಪ್ರತಿ ಸಭೆಯಲ್ಲೂ ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಹೇಳುತ್ತಾ ಬಂದಿದ್ದಾರೆ. ಆದರೆ 2026 ಬಂದರೂ ಯುಜಿಡಿ ಕೆಲಸ ಪೂರ್ಣಗೊಂಡಿಲ್ಲ ಎಂದರು. ಯುಜಿಡಿ ಕಾಮಗಾರಿ ಮುಗಿದರೆ ಒಳಚರಂಡಿ ಮಂಡಳಿಗೆ ಜಿಲ್ಲೆಯಲ್ಲಿ ಬೇರೆ ಯಾವುದೇ ಕೆಲಸ ಇರುವುದಿಲ್ಲ. ಅದಕ್ಕೆಂದೇ ಆ ಕಾಮಗಾರಿ ಮುಗಿಸುತ್ತಿಲ್ಲ ಎಂದು ಮಂತರ್ ಗೌಡ ವ್ಯಂಗ್ಯವಾಡಿದರು. ಯುಜಿಡಿ ಅಧಿಕಾರಿಗಳ ನಿರ್ಲಕ್ಷö್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಒಳಗಾಗಿಯಿತು. ಉದ್ಧಟತನದ ಮಾತುಗಳನ್ನು ಬಿಟ್ಟು ಮೊದಲು ಕೆಲಸ ಮಾಡಿ ಎಂದು ಸಚಿವ ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net