ಕಂದಾಯ ಸಚಿವರ ಹೇಳಿಕೆ ಖಂಡಿಸಿ ಬಾಳಲೆ ಬಂದ್

ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಹೇಳಿಕೆ ಖಂಡಿಸಿ ಬಾಳೆಲೆಯಲ್ಲಿ ಕೊಡವ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.  ಮಲಚೀರ ಬೋಸ್, ಚೆಪ್ಪುಡಿರ ರಾಕೇಶ್, ಮಾಪಂಗಡ ಯಮುನಾ ಚಂಗಪ್ಪ,ಪೋಡಮಾಡ ಸುಕೇಶ್,ಚಿಮ್ಮಣಮಾಡ ಕೃಷ್ಣ, ಕಿಲನ್ ಗಣಪತಿ, ಬೋಸ್ ಮಂದಣ್ಣ ಇತರರಿದ್ದರು.
ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಹೇಳಿಕೆ ಖಂಡಿಸಿ ಬಾಳೆಲೆಯಲ್ಲಿ ಕೊಡವ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು. ಮಲಚೀರ ಬೋಸ್, ಚೆಪ್ಪುಡಿರ ರಾಕೇಶ್, ಮಾಪಂಗಡ ಯಮುನಾ ಚಂಗಪ್ಪ,ಪೋಡಮಾಡ ಸುಕೇಶ್,ಚಿಮ್ಮಣಮಾಡ ಕೃಷ್ಣ, ಕಿಲನ್ ಗಣಪತಿ, ಬೋಸ್ ಮಂದಣ್ಣ ಇತರರಿದ್ದರು.
Published on
ಪೊನ್ನಂಪೇಟೆ: ವಿಧಾನಸಭಾ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೊಡಗಿನ ಪಟ್ಟೆದಾರರು ಬ್ರಿಟಿಷರಿಗೆ ಸೈನಿಕರನ್ನು ಒದಗಿಸುವ ಏಜೆಂಟರು ಎಂಬ ಪದ ಬಳಸಿರುವುದನ್ನು ಖಂಡಿಸಿ ಪೊನ್ನಂಪೇಟೆ ಸಮೀಪದ ಬಾಳೆಲೆ ಗ್ರಾಮದ ಕೊಡವ ಸಮುದಾಯ ಮತ್ತು ಕೊಡವ ಸಮಾಜ ಸೋಮವಾರ ಬಾಳಲೆ ಹೋಬಳಿಯಲ್ಲಿ ಒಂದು ಗಂಟೆ ಬಂದ್ ಮಾಡುವ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ.
ಅಧಿವೇಶನದಲ್ಲಿ ಜಮ್ಮಾ ಜಾಗದಲ್ಲಿ ಪಟ್ಟೆದಾರರ ಹೆಸರಿನಲ್ಲಿ ಇರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿಧೇಯಕ ಮಂಡಿಸುವಾಗ ಪಟ್ಟೇದಾರ ಎಂದರೆ ಏಜೆಂಟ್ ಎಂಬ ಪದಬಳಕೆ ಔಚಿತ್ಯವಲ್ಲ. ಸಚಿವರು ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸಿದರು.
ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್ ಮಾತನಾಡಿ, ಕಂದಾಯ ಸಚಿವರು ಆಡಿದ ಮಾತನ್ನು ಹಿಂಪಡೆಯುವ ಮೂಲಕ ಕೊಡಗಿನ ಜನರಲ್ಲಿ ಕ್ಷಮೆ ಕೇಳಬೇಕು, ಪಟ್ಟೆದಾರ ಎಂದರೆ ಕುಟುಂಬದ ಹಿರಿಯ ಎಂಬ ಗೌರವಪೂರ್ವಕವಾದ ವಾಕ್ಯವಾಗಿದೆ. ಈ ಬಗ್ಗೆ ತಿಳಿದುಕೊಳ್ಳದೆ ಸಚಿವರು ಬ್ರಿಟಿಷರ ಏಜೆಂಟರು ಎಂದು ಹೇಳುವ ಮೂಲಕ ಕೊಡವರ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ದೂರಿದರು.
ವೀರಾಜಪೇಟೆ ಬಿಜೆಪಿ ವಕ್ತಾರ ರಾಕೇಶ್ ದೇವಯ್ಯ, ಬಾಳಲೆ ವಿಜಯಲಕ್ಷ್ಮೀ ವಿದ್ಯಾಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಗುಮ್ಮಟೀರ ಕಿಲನ್ ಗಣಪತಿ, ಬಿಜೆಪಿ ಕೃಷಿ ಮೋರ್ಚಾ ಉಪಾಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ, ಬಾಳಲೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪೋಡಮಾಡ ಸುಕೇಶ್, ಅಡ್ಡೇಂಗಡ ಅಜಯ್, ಅರುಣ್, ರಾಕಿ ನಾಣಯ್ಯ, ಕಾಯಮಾಡ ರಾಜ, ಅರಮಣಮಾಡ ಸುಗುಣ ಗಣಪತಿ, ಚಂಗಪ್ಪ, ಸುಳ್ಳಿಮಾಡ ಸಂಪತ್, ಚಿಂಡಮಾಡ ಜಗನ್, ಮಂದೆಮಾಡ ಗಣಪತಿ, ಅಲೆಮಾಡ ಕರುಂಬಯ್ಯ, ಅದೇಂಗಡ ಚಂದ್ರಶೇಖರ್, ಗಾಣಂಗಡ ಮೋಹನ್, ಮುಕ್ಕಾಟೀರ ಕಾವೇರಪ್ಪ, ಹಾಗೂ ಬಾಳೆಲೆಯ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net