ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಬಾಲ ಸಂಗಮ ವೇದಿಕೆ

ಮಡಿಕೇರಿಯಲ್ಲಿ ನಡೆದ ಬಾಲಸಂಗಮ ಕಾರ್ಯಕ್ರಮದಲ್ಲಿ ಪುಟಾಣಿಗಳು ಮತ್ತು ಅವರ ಪೋಷಕರು ಭಾಗವಹಿಸಿದ್ದರು. ಬಿ.ವಿ. ಚಂದ್ರಶೇಖರ್, ಪಿ.ಎಂ. ರವಿ, ಜಯಾ ಪಾಲಾಕ್ಷ, ರಾಣಿ ಅರುಣ್, ಗೌರಮ್ಮ, ದೀಕ್ಷಾ, ಆಶಾ ಮತ್ತು ಗೀತಾ ಮೂರ್ತಿ ಮತ್ತಿತರರು ಇದ್ದರು.
ಮಡಿಕೇರಿಯಲ್ಲಿ ನಡೆದ ಬಾಲಸಂಗಮ ಕಾರ್ಯಕ್ರಮದಲ್ಲಿ ಪುಟಾಣಿಗಳು ಮತ್ತು ಅವರ ಪೋಷಕರು ಭಾಗವಹಿಸಿದ್ದರು. ಬಿ.ವಿ. ಚಂದ್ರಶೇಖರ್, ಪಿ.ಎಂ. ರವಿ, ಜಯಾ ಪಾಲಾಕ್ಷ, ರಾಣಿ ಅರುಣ್, ಗೌರಮ್ಮ, ದೀಕ್ಷಾ, ಆಶಾ ಮತ್ತು ಗೀತಾ ಮೂರ್ತಿ ಮತ್ತಿತರರು ಇದ್ದರು.
Published on
ಮಡಿಕೇರಿ:
ಇಲ್ಲಿನ ಬಾಲಗೋಕುಲ ಮತ್ತು ಮುಳಿಯ ಪ್ರತಿಷ್ಠಾನದ ಆಶ್ರಯದಲ್ಲಿ ಮುಳಿಯ ಜ್ಯುವೆಲ್ಸ್ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಲಾಗಿದ್ದ ಬಾಲಸಂಗಮ ಕಾರ್ಯಕ್ರಮ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಗೊಳಿಸುವಲ್ಲಿ ಯಶಸ್ವಿಯಾಯಿತು. ಮುಳಿಯ ಜ್ಯುವೆಲ್ಸ್ ವ್ಯವಸ್ಥಾಪಕ ಬಿ.ವಿ. ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳ ಸರ್ವತೋಮುಖ ಏಳಿಗೆಯಲ್ಲಿ ಇಂಥ ಮೌಲ್ಯಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದರು.
ವಂದೇ ಮಾತರಂ ಗೀತೆಯ ಭವ್ಯ ಇತಿಹಾಸದ ಕುರಿತು ಕಾರ್ಯಕ್ರಮದಲ್ಲಿ ಪಿ.ಎಂ. ರವಿ ವಿಶೇಷ ಉಪನ್ಯಾಸ ನೀಡಿದರು. ವಂದೇ ಮಾತರಂ ಗೀತೆಯು ಸ್ವಾತಂತ್ರ‍್ಯ ಹೋರಾಟದ ಕಾಲದಲ್ಲಿ ದೇಶಭಕ್ತರಿಗೆ ಹೇಗೆ ಸ್ಫೂರ್ತಿಯ ಸೆಲೆಯಾಗಿತ್ತು ಎಂಬುದನ್ನು ವಿವರಿಸಿದ ಅವರು, "ಹೆಜ್ಜೆಗಳು 150" ವರ್ಷಗಳ ಸಂಭ್ರಮದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಈ ಗೀತೆಯ ಉಗಮ ಮತ್ತು ಅದು ಭಾರತೀಯರಲ್ಲಿ ಮೂಡಿಸಿದ ರಾಷ್ಟ್ರಪ್ರೇಮದ ಕಿಚ್ಚಿನ ಬಗ್ಗೆ ಮಾಹಿತಿ ನೀಡಿದರು.
6 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಅವರ ಆಸಕ್ತಿ ಮತ್ತು ವಯೋಮಾನಕ್ಕೆ ಅನುಗುಣವಾಗಿ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿತ್ತು. ಮಕ್ಕಳು ವಂದೇ ಮಾತರಂ ಗಾಯನ, ದೇಶಭಕ್ತಿ ಗೀತೆಗಳು, ಶ್ಲೋಕ ಪಠಣ, ಕುಣಿತ ಭಜನೆ ಹಾಗೂ ವಿವಿಧ ರೀತಿಯ ಮನೋಲ್ಲಾಸದ ಆಟಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಇದರೊಂದಿಗೆ ಮಹಾಭಾರತ ಗ್ರಂಥ ಪಠಣದಿಂದ ಆಗುವ ಪ್ರಯೋಜನದ ಬಗ್ಗೆಯೂ ತಿಳುವಳಿಕೆ ನೀಡಲಾಯಿತು.
ಬಾಲಗೋಕುಲದ ಸಮರ್ಪಿತ ಕಾರ್ಯಕರ್ತರಾದ ಜಯಾ ಪಾಲಾಕ್ಷ, ರಾಣಿ ಅರುಣ್, ಗೌರಮ್ಮ, ದೀಕ್ಷಾ, ಆಶಾ ಮತ್ತು ಗೀತಾ ಮೂರ್ತಿ ಕಾರ್ಯಕ್ರಮ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net