21, 22 ರಂದು ಬ್ಯಾಡ್ಮಿಂಟನ್ ಪಂದ್ಯಾವಳಿ

ಬ್ಯಾಡ್ಮಿಂಟನ್ ಪಂದ್ಯಾವಳಿ
ಬ್ಯಾಡ್ಮಿಂಟನ್ ಪಂದ್ಯಾವಳಿ
Published on
ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮದಲ್ಲಿ ನಮೋ ಯುವಕರ ಸಂಘದ ವತಿಯಿಂದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಮಾರ್ಚ್ 21 ಮತ್ತು 22ರಂದು ಆಯೋಜಿಸಲಾಗಿದೆ.
ಪುರುಷರು ಮತ್ತು ಮಹಿಳೆಯರ ಡಬಲ್ಸ್ ಪಂದ್ಯಾಟ ಅಂದು ಸಂಜೆ 5 ರಿಂದ 10 ಗಂಟೆವರೆಗೆ ನಡೆಯಲಿದೆ. ಪುರುಷರ ವಿಭಾಗದ ಪಂದ್ಯಾವಳಿ ವಿಜೇತರಿಗೆ ಪ್ರಥಮ ಬಹುಮಾನ 5,555 ರೂ. ನಗದು, ದ್ವಿತೀಯ ಬಹುಮಾನ 4,444 ರೂ.ನಗದು ಹಾಗೂ ಮಹಿಳೆಯರ ವಿಭಾಗದ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಥಮ ಸ್ಥಾನ ವಿಜೇತರಿಗೆ 3,333 ರೂ.ನಗದು ,ದ್ವಿತೀಯ ಸ್ಥಾನ ವಿಜೇತರಿಗೆ 2,222 ರೂ. ವಿತರಿಸಲಾಗುವುದು. ಹೊನಲು ಬೆಳಕಿನ ಪಂದ್ಯದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ನಮೋ ಯುವಕರ ಸಂಘದ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net