ಅಯ್ಯಪ್ಪಸ್ವಾಮಿ ಮಂಡಲ ಪೂಜೆ

ಭಾಗಮಂಡಲದಲ್ಲಿ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ  ಅದ್ಧೂರಿಯಿಂದ ನೆರವೇರಿತು.
ಭಾಗಮಂಡಲದಲ್ಲಿ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ ಅದ್ಧೂರಿಯಿಂದ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಅಯ್ಯಪ್ಪಸ್ವಾಮಿ ಮಂಡಲ ಪೂಜೆ
ಮಡಿಕೇರಿ: ಭಾಗಮಂಡಲದಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುವಂತೆ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ ಅದ್ಧೂರಿಯಿಂದ ನೆರವೇರಿತು.
ಗುರುಸ್ವಾಮಿಗಳಾದ ಸಿ.ಆರ್.ಜಯನ್ ಮತ್ತು ಎಚ್.ಎಸ್.ವಸಂತ್ ಅವರ ನೇತೃತ್ವದಲ್ಲಿ ಭಾಗಮಂಡಲದ ತಲಕಾವೇರಿ ರಸ್ತೆಯ ಸಮೀಪಲ್ಲಿರುವ ಅಯ್ಯಪ್ಪ ಬನದಲ್ಲಿ ಪೂಜೆ ಪ್ರಾರಂಭಿಸಲಾಯಿತು. ನಂತರ ಸಿಂಗಾರಿ ಮೇಳದೊಂದಿಗೆ ಅಯ್ಯಪ್ಪ ಸ್ವಾಮಿಯ ಶೋಭಾ ಯಾತ್ರೆ ಭಾಗಮಂಡಲದ ಮುಖ್ಯರಸ್ತೆಯಲ್ಲಿ ಆಗಮಿಸಿ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಡಲ ಪೂಜಾ ನೆರವೇರಿತು.
ಮಂಡಲ ಪೂಜೆಯಲ್ಲಿ ಭಾಗಮಂಡಲ, ಕರಿಕೆ ಅಯ್ಯಂಗೇರಿ, ದೊಡ್ಡಪುಲಿಕೊಟ್ಟು, ನಾಪೋಕ್ಲು, ಬೆಟ್ಟಗೇರಿ, ಚೆರಂಬಾಣೆ, ಅಕ್ಕಪಕ್ಕದ ಗ್ರಾಮಗಳಿಂದ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಮತ್ತು ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮತ್ತು ಅನ್ನದಾನ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net