ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ನಡೆ ತೆಗೆಯುವುದು, ನಿರ್ಮಲ್ಯ ಪೂಜೆ, ಗಣಪತಿ ಹೋಮ, ಅಷ್ಟಾಭಿಷೇಕ ಸೇವೆ, ತುಳಸಿ ಸಹಸ್ರನಾಮಾರ್ಚನೆ, ಮಹಾಪೂಜೆ, ಪಾಲಕೊಂಬು ಪ್ರತಿಷ್ಠಾಪನೆ ಹಾಗೂ ತಾಯಂಬಕಂ (ಚಂಡೆಸೇವೆ) ನಡೆಯಿತು.