ಅಯ್ಯಂಗೇರಿ ಚಿನ್ನತಪ್ಪ ಉತ್ಸವ

ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಶ್ರೀಕೃಷ್ಣ ಚಿನ್ನತಪ್ಪ ದೇವಸ್ಥಾನದಲ್ಲಿ ನಡೆದ ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು.
ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಶ್ರೀಕೃಷ್ಣ ಚಿನ್ನತಪ್ಪ ದೇವಸ್ಥಾನದಲ್ಲಿ ನಡೆದ ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು.
Published on
ಮಡಿಕೇರಿ:
ಭಾಗಮಂಡಲ ಸಮೀಪದ ಅಯ್ಯಂಗೇರಿ ಗ್ರಾಮದ ಶ್ರೀಕೃಷ್ಣ ಚಿನ್ನತಪ್ಪ ದೇವಸ್ಥಾನದಲ್ಲಿ ವಾರ್ಷಿಕ ಪೂಜೋತ್ಸವ ಬುಧವಾರ ಭಕ್ತಿಪೂರ್ವಕ ಆಚರನೆಗಳೊಂದಿಗೆ ವಿಜೃಂಭಣೆಯಿAದ ಆರಂಭವಾಯಿತು. ಭಗವಾನ್ ಶ್ರೀ ಕೃಷ್ಣನದ್ದು ಎನ್ನಲಾದ ಕೊಳಲು ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿದ್ದು, ಉತ್ಸವದ ಸಂದರ್ಭದಲ್ಲಿ ದೇವಾಲಯದಿಂದ ಹೊರತೆಗೆದಯ ನುಡಿಸಲಾಗುತ್ತಿದೆ. ಈ ವರ್ಷ ಚಿಂಗAಡ ಕುಟುಂಬದ ಶಿವಾಜಿ ದೇವರ ಕೋಳಲನ್ನು ಹೊತ್ತು ನಡೆದರು.್ತ ಬಿದ್ಯಾಂಡ ಕುಟುಂಬದ ಹರೀಶ್ ಕೊಡೆ ಹಿಡಿದು ಜತೆಯಲ್ಲಿ ಸಾಗಿದರು.
14 ಕುಟುಂಬದ ತಕ್ಕ ಮುಖ್ಯಸ್ಥರು ಉತ್ಸವದಲ್ಲಿ ಭಾಗವಹಿಸಿದ್ದರು. ಶ್ರೀ ಕೃಷ್ಣನ ಇಂಪಾದ ಕೊಳಲಿನ ನಾದವನ್ನು ಕೇಳಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದರು. ಎತ್ತು ಹೋರಾಟ, ಕೇರಳದ ಚೆಂಡೆವಾದನ ಗಮನ ಸೆಳೆಯಿತು.
ಗುರುವಾರ (ಮಾ.12) ಬೆಳಗ್ಗೆ 11.30 ರಿಂದ ಪಟ್ಟಣಿ ಹಬ್ಬ (ದೊಡ್ಡಹಬ್ಬ), ಶುಕ್ರವಾರ (ಮಾ.13) ಭಂಡಾರ ಇಡುವುದು ಮತ್ತು ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net