ಉದ್ದಿಮೆದಾರರಿಗೆ ಅರಿವು ಕಾರ್ಯಗಾರ

ಕುಶಾಲನಗರದ ಪಾಳ್ಯಂ ಎಮರಾಲ್ಡ್ ಸಭಾಂಗಣದಲ್ಲಿ ಎಂಎಸ್‌ಎAಇ ಉದ್ದಿಮೆದಾರರಿಗೆ ಏರ್ಪಡಿಸಿದ್ದ ಒಂದು ದಿನದ ಅರಿವು ಕಾರ್ಯಾಗಾರವನ್ನು ಕೂಡ್ಲೂರು ಕೈಗಾರಿಕಾ ಪ್ರದೇಶದ ಉದ್ದಿಮೆದಾರರ ಸಂಘದ ಅಧ್ಯಕ್ಷ ಎ.ಎನ್. ಪ್ರವೀಣ್ ಉದ್ಘಾಟಿಸಿದರು. ಬಿ.ಆರ್. ನಾಗೇಂದ್ರಪ್ರಸಾದ್, ಸಿದ್ದರಾಜು, ಕೆ. ಹನುಮಂತರಾಯ ಮತ್ತಿತರರು ಇದ್ದರು.
ಕುಶಾಲನಗರದ ಪಾಳ್ಯಂ ಎಮರಾಲ್ಡ್ ಸಭಾಂಗಣದಲ್ಲಿ ಎಂಎಸ್‌ಎAಇ ಉದ್ದಿಮೆದಾರರಿಗೆ ಏರ್ಪಡಿಸಿದ್ದ ಒಂದು ದಿನದ ಅರಿವು ಕಾರ್ಯಾಗಾರವನ್ನು ಕೂಡ್ಲೂರು ಕೈಗಾರಿಕಾ ಪ್ರದೇಶದ ಉದ್ದಿಮೆದಾರರ ಸಂಘದ ಅಧ್ಯಕ್ಷ ಎ.ಎನ್. ಪ್ರವೀಣ್ ಉದ್ಘಾಟಿಸಿದರು. ಬಿ.ಆರ್. ನಾಗೇಂದ್ರಪ್ರಸಾದ್, ಸಿದ್ದರಾಜು, ಕೆ. ಹನುಮಂತರಾಯ ಮತ್ತಿತರರು ಇದ್ದರು.
Published on
ಮಡಿಕೇರಿ:
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (ಕೆಸಿಟಿಯು), ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್), ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ, ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ರೈಸಿಂಗ್ ಅಂಡ್ ಎಕ್ಸಲರೇಟಿಂಗ್ ಎಂಎಸ್‌ಎAಇ ಫರ್‌ಫಾರ್ಮೆನ್ಸ್ ರ‍್ಯಾಂಪ್) ಅಡಿ ಜೀರೋ ಡಿಪೆಕ್ಟ್ ಅಂಡ್ ಜೀರೋ ಇಪೆಕ್ಟ್ ಮತ್ತು ಎಲ್‌ಇಎಎನ್ ಯೋಜನೆ ಕುರಿತು ಕುಶಾಲನಗರದ ಪಾಳ್ಯಂ ಎಮರಾಲ್ಡ್ ಸಭಾಂಗಣದಲ್ಲಿ ಎಂಎಸ್‌ಎAಇ ಉದ್ದಿಮೆದಾರರಿಗೆ ಒಂದು ದಿನದ ಅರಿವು ಕಾರ್ಯಾಗಾರ ಬುಧವಾರ ನಡೆಯಿತು.
ಕಾರ್ಯಾಗಾರವನ್ನು ಕುಶಾಲನಗರ ಕೂಡ್ಲೂರು ಕೈಗಾರಿಕಾ ಪ್ರದೇಶದ ಉದ್ದಿಮೆದಾರರ ಸಂಘದ ಅಧ್ಯಕ್ಷ ಎ.ಎನ್. ಪ್ರವೀಣ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಬೆಂಗಳೂರು ಟೆಕ್ಸಾಕ್ ಮುಖ್ಯ ಸಲಹೆಗಾರರು ಹಾಗೂ ಸಿಇಒ ಸಿದ್ದರಾಜು ರ‍್ಯಾಂಪ್ ಯೋಜನೆಯ ಬಗ್ಗೆ ಪ್ರಸ್ತಾವಿಕ ಭಾಷಣ ಮಾಡಿದರು. ಜೀರೋ ಡಿಪೆಕ್ಟ್ ಅಂಡ್ ಜೀರೋ ಇಪೆಕ್ಟ್ ಮತ್ತು ಎಲ್‌ಇಎಎನ್ ಯೋಜನೆಯ ಕಾರ್ಯಾಗಾರದ ಬಗ್ಗೆ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಕ್ರಿಯಟಿವ್ ಇಂಪೆಕ್ಸ್ನ ಬಿ. ಶ್ರೀಕಾಂತ್ ವಿವರವಾದ ತಾಂತ್ರಿಕ ಉಪನ್ಯಾಸ ನೀಡಿದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ. ಹನುಮಂತರಾಯ, ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ. ಗಂಗಾಧರ್ ನಾಯಕ್, ಕೆ.ಎಸ್.ಎಫ್.ಸಿ. ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸಿ.ಎನ್.ರಘು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net