ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿಗಳಲ್ಲಿ ಒಂದಾದ ಶ್ರೀಮತಿ ವಿಜಯ ವಿಷ್ಣು ಭಟ್ 2025-26 ನೇ ಸಾಲಿನ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಸಾಹಿತಿ ಪ್ರತಿಮಾ ರೈ ಹರೀಶ್ ಆಯ್ಕೆ ಆಗಿದ್ದಾರೆ. ಪ್ರತಿಮಾ ಹರೀಶ್ ರೈ ಸೋಮವಾರಪೇಟೆ ತಾಲೂಕು ಅಬ್ಬೂರು ಕಟ್ಟೆ ಗ್ರಾಮದ ದಡ್ಡಂಗಡಿ ಮನೆಯವರು. ಕನ್ನಡ ಮತ್ತು ಇತಿಹಾಸ ಎಂ.ಎ. ಬಿ. ಎಡ್ ಪದವೀಧರೆ. 2004 ಕನ್ನಡ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರು. 2019 ರಿಂದ ಸೈಂಟ್ ಆನ್ಸ್ ಪದವಿ ಕಾಲೇಜ್‌ನಲ್ಲಿ ಕನ್ನಡ ಉಪನ್ಯಾಸಕಿಯಾಗಿ ತಮ್ಮ ಸೇವೆ ಮುಂದುವರಿಸಿದ್ದಾರೆ. ಬಹುಮುಖ ಆಸಕ್ತಿಯ ಪ್ರತಿಮಾ ರೈ ಸಂಗೀತ, ಸಾಹಿತ್ಯ ಮತ್ತು ಬರಹದಂಥ ಕ್ಷೇತ್ರಗಳನ್ನು ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.