ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ವೈಸಿಸಿ ಕ್ಲಬ್‌ನ ಅಧ್ಯಕ್ಷ ಕಿರಣ್‌ಗೌಡ ವಹಿಸಿದ್ದರು. ಕಾರ್ಯದರ್ಶಿ ಲೋಹಿತ್, ಉದ್ಯಮಿ ಡಿ.ಜೆ.ಮಹೇಶ್, ಸಿ.ಡಿ.ಪ್ರವೀಣ್, ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವೈ.ಎಂ.ನಾಗರಾಜು. ಡಿ.ಎಸ್.ರಘು, ಏಲಕ್ಕಿ ಸಹಕಾರ ಸಂಘದ ನಿರ್ದೇಶಕ ಡಿ.ಸಿ.ರಾಜು, ದೊಡ್ಡತೋಳೂರಿನ ಪ್ರಸಿದ್ಧ್ ಸೇರಿದಂತೆ ಇತರರು ಇದ್ದರು.ಹಿರಿಯ ಕ್ರಿಕೆಟಿಗರಾದ ಯಡೂರು ಗ್ರಾಮದ ಅಸೆಗೋಡಿಮನೆ ಪರಮೇಶ್ ಅವರನ್ನು ಸನ್ಮಾನಿಸಲಾಯಿತು.