ಮದ್ಯದ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನ

ಕಳ್ಳತನಕ್ಕೆ ಯತ್ನ ನಡೆಸಿ ಮದ್ಯದ ಅಂಗಡಿ ಬೀಗ ಮುರಿದಿರುವುದು.
ಕಳ್ಳತನಕ್ಕೆ ಯತ್ನ ನಡೆಸಿ ಮದ್ಯದ ಅಂಗಡಿ ಬೀಗ ಮುರಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • Attempted robbery
ವಿರಾಜಪೇಟೆ: ವ್ಯಾಪಾರ ಮುಗಿಸಿ ಮುಚ್ಚಲಾಗಿದ್ದ ಮದ್ಯದ ಅಂಗಡಿ ಕಳ್ಳತನಕ್ಕೆ ಪ್ರಯತ್ನ ಮಾಡಿ, ವಿಫಲವಾದ ಘಟನೆ ನಗರದ ಹೃದಯ ಭಾಗದಲ್ಲಿ ಇತ್ತೀಚೆಗೆ ಜರುಗಿದೆ.
ನಗರದ ಎಫ್.ಎಂ.ಸಿ. ರಸ್ತೆಯ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಹೊಂದಿರುವ ಮದ್ಯದ ಮಳಿಗೆಗೆ ಒಬ್ಬ ಕಳ್ಳತನ ಮಾಡಲು ಯತ್ನಿಸಿ ವಿಫಲನಾಗಿದ್ದಾನೆ. ಮಾ. 9 ರಂದು ಸಿಬ್ಬಂದಿ ವ್ಯಾಪಾರ ಮುಗಿಸಿ ಬಾರ್‌ಗೆ ಬೀಗ ಹಾಕಿ ಹೋಗಿದ್ದರು. ಮಾರನೇ ದಿನ ಬೆಳಗ್ಗೆ ಬಂದು ನೋಡಿದಾಗ ಬಾರ್‌ಗೆ ಹಾಕಿದ್ದ ಎರಡು ಬೀಗಗಳನ್ನು ಒಡೆದು ಹಾಕಿರುವುದು ಗೊತ್ತಾಗಿದೆ.
ತಕ್ಷಣ ಸಿಬ್ಬಂದಿ ಫೆಡರೇಶನ್ ಕಾರ್ಯದರ್ಶಿಗೆ ಮಾಹಿತಿ ನೀಡಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಠಾಣಾಧಿಕಾರಿ ಪ್ರಮೋದ್, ಎ.ಎಸ್.ಐ. ಕಾವೇರಪ್ಪ ಹಾಗೂ ಸಿಬ್ಬಂದಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net