ಪ್ರೋತ್ಸಾಹ ದೊರೆತರೆ ಕ್ರೀಡಾಪಟುಗಳಿಂದ ಉತ್ತಮ ಸಾಧನೆ

ಮಾಲಂಬಿ ಬ್ರದರ್ಸ್ ವತಿಯಿಂದ ಆಯೋಜಿಸಿದ್ದ ವಾಲಿಬಾಲ್ ಕ್ರೀಡಾಕೂಟವನ್ನು ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣರಾಜ್ ಉದ್ಘಾಟಿಸಿದರು. ಪ್ರಸನ್ನಕುಮಾರ್, ಅಶೋಕ್, ಸುರೇಶ್, ಜಯಕುಮಾರ್ ಇತರರು ಇದ್ದರು.
ಮಾಲಂಬಿ ಬ್ರದರ್ಸ್ ವತಿಯಿಂದ ಆಯೋಜಿಸಿದ್ದ ವಾಲಿಬಾಲ್ ಕ್ರೀಡಾಕೂಟವನ್ನು ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣರಾಜ್ ಉದ್ಘಾಟಿಸಿದರು. ಪ್ರಸನ್ನಕುಮಾರ್, ಅಶೋಕ್, ಸುರೇಶ್, ಜಯಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • athletes
ಶನಿವಾರಸಂತೆ: ತರಬೇತುದಾರರು, ಪಾಲಕರು ಹಾಗೂ ಜನರ ಪ್ರೋತ್ಸಾಹ ಇದ್ದರೆ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಶನಿವಾರಸಂತೆ ಪೊಲೀಸ್ ವೃತ್ತ ನೀರಿಕ್ಷಕ ಕೃಷ್ಣರಾಜ್ ಅಭಿಪ್ರಾಯಪಟ್ಟರು.
ಮಾಲಂಬಿ ಬ್ರದರ್ಸ್ ವತಿಯಿಂದ ಮಾಲಂಬಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸೋಮವಾರಪೇಟೆ, ಕುಶಾಲನಗರ ತಾಲೂಕು ಹಾಗೂ ಹಾಸನ ಜಿಲ್ಲೆಯ ಮರಿಯನಗರ ಮತ್ತು ಅರಗಲ್ಲು ತಂಡಗಳಿಗೆ ಏರ್ಪಡಿಸಿದ್ದ ವಾಲಿಬಾಲ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕ್ರೀಡಾ ಆಸಕ್ತಿ ಇರುತ್ತದೆ. ಪಾಲಕರು ಮತ್ತು ಶಿಕ್ಷಕರು ಇದನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ನೀಡಬೇಕು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಇಂತಹವರಿಗೆ ಸೂಕ್ತ ತರಬೇತಿ ನೀಡಿದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರುತ್ತಾರೆ ಎಂದು ತಿಳಿಸಿದರು.
ಆಲೂರು ಸಿದ್ದಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಇಂದು ಗ್ರಾಮೀಣ ಭಾಗದ ಬಹಳಷ್ಟು ಕ್ರೀಡಾಪಟುಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಮಾಲಂಬಿ ಬ್ರದರ್ಸ್ ತಂಡದವರು ಈ ಭಾಗದ ಕ್ರೀಡಾಪಟುಗಳಿಗೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ಮುಂದುವರಿಯಲಿ ಎಂದು ತಿಳಿಸಿದರು.
ಕಾಫಿ ಬೆಳೆಗಾರ ಎಂ.ಡಿ. ಸುರೇಶ್ ಮಾತನಾಡಿ, ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಹಾಗೂ ಕ್ರೀಡಾಕ್ಷೇತ್ರದ ಬೆಳವಣಿಗೆಗಾಗಿ ಕ್ರೀಡಾಕೂಟ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಉದ್ಯಮಿ ಆಲೂರು ಜಯಕುಮಾರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಲಂಬಿ ಬ್ರದರ್ಸ್ ತಂಡದ ಅಧ್ಯಕ್ಷ ಸಿದ್ದಪ್ಪಾಜಿ ವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್, ಪ್ರಮುಖರಾದ ಸರೋಜಾ ಮಹಾಂತಪ್ಪ, ಉದ್ಯಮಿ ಶೇಖರ್, ತೀರ್ಥ ಪ್ರಸಾದ್, ಸುಬ್ರಮಣ್ಯ, ಮಾಲಂಬಿ ಗ್ರಾಮ ಸಮಿತಿ ಅಧ್ಯಕ್ಷ ಮಹೇಶ್, ಮಾಲಂಬಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಲಿಂಗರಾಜು, ದಯಾನಂದ, ಎಚ್.ಜೆ. ಲೋಕೇಶ್, ಮಲ್ಲೇಶ್, ಹೊನ್ನಪ್ಪ, ಸಂತೋಷ, ಸುಂದರ್, ಬಿಪಿನ್, ಶಿಕ್ಷಕಿ ರೀನಾ, ಸುಂದರ್, ಮುತ್ತಪ್ಪ, ಚೆನ್ನಕೇಶವ, ಉಣ್ಣಿ ಕೃಷ್ಣ, ಸುಬ್ರಮಣ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net