ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮ ಶ್ರೀ ಚಾಮುಂಡೇಶ್ವರಿ ದೇವಿಯ ಅಷ್ಟಬಂಧ ಬ್ರಹ್ಮಕಲಶ ಮುಹೂರ್ತ ಮತ್ತು ನಾಗದೇವರು, ಗುಳಿಗ ದೈವದ ಪ್ರತಿಷ್ಠಾಪನಾ ಕಾರ್ಯ ಶ್ರದ್ಧಾ-ಭಕ್ತಿಯೊಂದಿಗೆ ಅದ್ದೂರಿಯಾಗಿ ಈಚೆಗೆ ನಡೆಯಿತು. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ವಿವಿಧ ದೈವಿಕ ಕೈಂಕರ್ಯಗಳು ನೆರವೇರಿದವು. ಆದ್ಯ ಗಣಪತಿ ಹೋಮ, ನವಗ್ರಹ ಹೋಮ, ಶಿಖರ ಪೂಜೆ ಮತ್ತು ಪ್ರತಿಷ್ಠೆ, ಸಪ್ತ ಶುದ್ಧಿ, ಶಾಂತಿ ಪ್ರಾಯಶ್ಚಿತ ಹೋಮ, ತತ್ವ ಹೋಮ, ಅಧಿವಾಸ ಹೋಮ, ಸುದರ್ಶನ ಹೋಮ, ರಾಕ್ಷೆÆÃಘ್ನ ಹೋಮ, ಚಾಮುಂಡೇಶ್ವರಿ ಹೋಮ, ವಾಸ್ತು ಹೋಮ, ಪ್ರಕಾರ ಬಲಿ, ಬ್ರಹ್ಮ ಕಲಶಾಧಿವಾಸ, ಚಾಮುಂಡೇಶ್ವರಿ ದೇವಿಯ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ, ನಿದ್ರಾ ಕುಂಬಾಭೀಷೇಕ, ದುರ್ಗಾ ಹೋಮ, ನಾಗ ಪ್ರತಿಷ್ಠ, ಗುಳಿಗ ದೈವ ಪ್ರತಿಷ್ಠೆಯೊಂದಿಗೆ ಬ್ರಹ್ಮ ಕಲಶಾಭಿಷೇಕ ನೆರವೇರಿತು.