ಏ. 25 ರಿಂದ ಮೇ 8ರ ವರೆಗೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ವಾರ್ಷಿಕೋತ್ಸವ

ನವೀಕರಣಗೊಂಡಿರುವ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ
ನವೀಕರಣಗೊಂಡಿರುವ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ
Published on
ಮಡಿಕೇರಿ:
ಸುಮಾರು ಐನೂರು ವರ್ಷಗಳಿಂದ ಧಾರ್ಮಿಕತೆಯನ್ನು ಪಸರಿಸುತ್ತಾ, ಸ್ಥಳೀಯರಲ್ಲಿ ಆಧ್ಯಾತ್ಮವನ್ನು ಅರಳಿಸಿ, ಭಕ್ತಿಯಲ್ಲಿ ಮೈಮರೆಸಿದ ಭಾಗಮಂಡಲ ಹೋಬಳಿ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ನವೀಕರಣಗೊಂಡಿದ್ದು, ಈ ಪ್ರಯುಕ್ತ ಏ. 25 ರಿಂದ ಮೇ 8ರ ವರೆಗೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ವಾರ್ಷಿಕೋತ್ಸವ ನಡೆಯಲಿದೆ.
ಸುಮಾರು ಒಂದು ಕೋಟಿ ಮೂವತ್ತು ಲಕ್ಷ ರೂ. ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಏ. 25 ರಂದು ಪೂರ್ವಾಹ್ನ 9.30 ಗಂಟೆಗೆ ಆಜ್ಞಾ ಮುಹೂರ್ತ ಮತ್ತು ಬೆಟ್ಟದಿಂದ ದೇವರು ತರುವುದು, 26 ರಂದು ಪೂರ್ವಾಹ್ನ 7 ಗಂಟೆಗೆ ಗ್ರಾಮ ಸಂಸ್ಕೃತಿ ಕುರಿತು ಮಕ್ಕಳಿಂದ ಹೀಲಿಯಾಟ, ಸಂಜೆ 7 ರಿಂದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಪ್ರಸಾದ ಶುದ್ದಿ, ವಾಸ್ತು ರಕ್ಷೋಜ್ಞ ಹೋಮ, ವಾಸ್ತು ಬಲಿ ನಡೆಯಲಿದೆ.
27 ರಂದು ಬೆಳಗ್ಗೆ 7 ಗಂಟೆಯಿAದ ಗಣಪತಿ ಹೋಮ, ಬಿಂಬ ಶುದ್ದಿ, ಕಲಶಾಭಿಷೇಕ, ದ್ವಾರಪ್ರಾಯಶ್ಚಿತ ಹೋಮ, ಕಲಶಾಭಿಷೇಕ, ಸಂಜೆ 7ಕ್ಕೆ ದುರ್ಗಾ ನಮಸ್ಕಾರ ಪೂಜೆ, ಲಲಿತ ಸಹಸ್ರನಾಮ ಪಾರಾಯಣ ನಡೆಯಲಿದೆ
28 ರಂದು ಬೆಳಗ್ಗೆ ಗಣಪತಿ ಹೋಮ, ಶಾಂತಿ ಹೋಮಗಳು, ಕಲಶಾಭಿಷೇಕ, ಬ್ರಹ್ಮಕಲಶ, ಮಂಟಪ ಸಂಸ್ಕಾರ, ಕುಂಬೇಶ ಕರ್ಕರಿ ಕಲಶಪೂಜೆ, ಹೋಮ ಕಲಶಾಭಿಷೇಕ, ಮಧ್ಯಾಹ್ನದ ಪೂಜೆ, ನಂತರ ರಾತ್ರಿ 7ಕ್ಕೆ ಅಧಿವಾಸ ಹೋಮ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾದಿವಾಸ ನೆರವೇರಲಿದೆ.
29 ರಂದು ಬೆಳಗ್ಗೆ 7ಕ್ಕೆ ಗಣಪತಿ ಹೋಮ, ತತ್ವ ಕಲಶ ಪೂಜೆ, ತತ್ವ ಹೋಮ, ತತ್ವ ಕಲಸಾಭಿಷೇಕ, ಅನುಜ್ಞಾ ಕಲಶಾಭಿಷೇಕ ನಡೆಯಲಿದೆ. ಸಂಜೆ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಶ್ರೀ ಬಲಿ ಸೇವಾ ಸುತ್ತುಗಳು, ನೃತ್ಯಬಲಿ, ಸಂಜೆ 4.30 ರಿಂದ ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ.
30ರಂದು ನವೀಕೃತ ಪೌಳಿಯ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ತಾವೂರು ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನದ ಅಧ್ಯಕ್ಷ ಕೋಳಿಬೈಲು ಸಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಮುಜುರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೈಸೂರು, ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೌಳಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಉದ್ಯಮಿ ಕೇಕಡ ನಂದ, ನಿವೃತ್ತ ಪ್ರಾಂಶುಪಾಲ ಬಾರಿಕೆ ರಾಘವ, ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ಕಾಸರಗೋಡು ವಾಸ್ತುಶಿಲ್ಪಿ ರಮೇಶ್ ಕಾರಂತ್, ಡಿ.ಸಿ.ಸಿ. ಬ್ಯಾಂಕ್, ನಿರ್ದೇಶಕ ಹೊಸೂರು ಜೆ. ಸತೀಶ್ ಕುಮಾರ್, ತಾವೂರು ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಅಮೆ ಬಾಲಕೃಷ್ಣ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕುದುಕುಳಿ ಸಿ. ಅಶ್ವತ್ಥ್ ಮತ್ತಿತರರು ಪಾಲ್ಗೊಳ್ಳುವರು ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
"

ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನಕ್ಕೆ ಸುಮಾರು 500 ವರ್ಷಗಳ ಇತಿಹಾಸ ಇದೆ. ಈ ಭಾಗದಲ್ಲಿ ಧಾರ್ಮಿಕತೆಯನ್ನು ಪಸರಿಸುತ್ತಾ, ಸ್ಥಳೀಯರಲ್ಲಿ ಆಧ್ಯಾತ್ಮವನ್ನು ಅರಳಿಸುತ್ತಾ, ಭಕ್ತಿಯಲ್ಲಿ ಮೈಮರೆಸುತ್ತಾ ಬಂದಿರುವ ದೇವಾಲಯವನ್ನು ಸುಮಾರು ಒಂದು ಕೋಟಿ ಮೂವತ್ತು ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದೆ. ಈ ಪ್ರಯುಕ್ತ ಏ. 25 ರಿಂದ ಮೇ 8ರ ವರೆಗೆ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಮತ್ತು ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net