ಬೆಣ್ಣೆಹಣ್ಣು ಚಿಗುರು, ಕಾಯಿಗಳ ಕಳವು ಮಾಡಿದ್ದವರ ಬಂಧನ

butter fruit
butter fruit
Published on
ಸಿದ್ದಾಪುರ: ತೋಟದಲ್ಲಿ ಬೆಳೆಸಲಾಗಿದ್ದ ಅವಕಾಡೋ (ಬೆಣ್ಣೆ ಹಣ್ಣು) ಗಿಡಗಳ ಚಿಗುರು ಹಾಗೂ ಕಾಯಿಗಳನ್ನು ಕಳವು ಮಾಡಿದ ಆರೋಪದ ಮೇರೆಗೆ ಐವರನ್ನು ಸಿದ್ದಾಪುರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತ್ಯಾಗತ್ತೂರು ಗ್ರಾಮದವರಾದ ಸಿದ್ದೀಕ್, ನಿಸಾರ್, ಹ್ಯಾರಿಸ್ ಹಾಗೂ ಕೂಡೂರು-ಚೆಟ್ಟಳ್ಳಿ ನಿವಾಸಿಗಳಾದ ವಿನೋದ್ ಹಾಗೂ ಶಕೀಲ್ ಬಂಧಿತರು.
ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಶಾಲೆ ರಸ್ತೆ ನಿವಾಸಿ ಹಾಗೂ ಉದ್ಯಮಿ ಕೆ.ಬಿ.ಹಸೈನಾರ್ ಅವರಿಗೆ ಸೇರಿದ ವಾಲ್ಲೂರು-ತ್ಯಾಗತ್ತೂರು ಗ್ರಾಮದ ಕಾಫಿ ತೋಟದಲ್ಲಿ ಕೃಷಿ ಮಾಡಿ ಬೆಳೆಸಲಾಗಿದ್ದ ಅವಕಾಡೋ ಗಿಡಗಳಿಂದ ಚಿಗುರು ಹಾಗೂ ಕಾಯಿಗಳನ್ನು ಬಂಧಿತ ಐವರು ಇತ್ತೀಚೆಗೆ ಕಳವು ಮಾಡಿದ್ದರು. ಈ ಕುರಿತು ಹಸೈನಾರ್ ಅವರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಸುಮಾರು ಅವಕಾಡೋ ಚಿಗುರು ಹಾಗೂ ಕಾಯಿಗಳನ್ನು ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net