24ಕ್ಕೆ ಅರೆಭಾಷೆ ರಾಷ್ಟ್ರೀಯ ವಿಚಾರಸಂಕಿರಣ

ಅಕಾಡೆಮಿ ಚಿನ್ನೆ
ಅಕಾಡೆಮಿ ಚಿನ್ನೆ
Published on
ನಾಪೋಕ್ಲು: ಅರೆಭಾಷೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವು ಫೆ. 24ರಂದು ಸುಳ್ಯದಲ್ಲಿ ಜರುಗಲಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಯೋಗದಲ್ಲಿ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಸಹಯೋಗದಲ್ಲಿ ಕಾಲೇಜಿನ ಸುವರ್ಣ ಸಂಭ್ರಮಾಚರಣೆ ಪ್ರಯುಕ್ತ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣವು ಕೆ.ವಿ.ಜಿ. ಸಾಹಿತ್ಯ ಭವನ, ರಂಗ ಮಂದಿರ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿ ನಡೆಯಲಿದೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸುವರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಲಿದ್ದಾರೆ. ಎಒಎಲ್ಇ ಪ್ರಧಾನ ಕಾರ್ಯದರ್ಶಿ ಕೆ.ಸಿ.ಅಕ್ಷಯ್, ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ.ರುದ್ರಕುಮಾರ್, ನೆಹರು ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲೆ ಪಿ.ಮಿಥಾಲಿ ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ ಭಾಗವಹಿಸುವರು.
ಪ್ರಥಮ ಅಧಿವೇಶನದ ಭಾಷಾ ವಿಚಾರ ಸಂಕಿರಣದಲ್ಲಿ ಪ್ರಾದೇಶಿಕ ಭಾಷೆಗಳು ಎದುರಿಸುತ್ತಿರುವ ಸವಾಲುಗಳು ವಿಷಯದ ಬಗ್ಗೆ ಡಾ.ಧನಂಜಯ ಕುಂಬ್ಳೆ, ಜಾಗತೀಕರಣ ಮತ್ತು ಸಾಂಸ್ಕೃತಿಕ ಪಲ್ಲಟಗಳು ವಿಷಯದ ಬಗ್ಗೆ ಡಾ.ನರೇಂದ್ರ ರೈ ದೇರ್ಲ ಪ್ರಬಂಧ ಮಂಡಿಸಲಿದ್ದಾರೆ. ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪಗೌಡ ಅಧ್ಯಕ್ಷತೆ ವಹಿಸುವರು.
ದ್ವಿತೀಯ ಅಧಿವೇಶನದಲ್ಲಿ ಅರೆಭಾಷೆ ವಿಚಾರಸಂಕಿರಣ ನಡೆಯಲಿದೆ. ಅರೆಭಾಷೆ ಅನನ್ಯತೆಗೆ ವಿಷಯ ಕುರಿತು ಕೆ.ಆರ್.ಗಂಗಾಧರ ಹಾಗೂ ಅರೆಭಾಷೆಯ ಪ್ರಾದೇಶಿಕ ವಿಭಿನ್ನತೆ ವಿಷಯ ಕುರಿತು ಡಾ.ಪುರುಷೋತ್ತಮ ಕರಂಗಲ್ಲು ಮಾತನಾಡುವರು. ಸಾಹಿತಿ ಪ್ರೊ.ಕೆ.ಇ. ರಾಧಾಕೃಷ್ಣ ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭೋಜನ ನಂತರದ ಅವಧಿಯಲ್ಲಿ ಅರೆಭಾಷೆ ಸಂಸ್ಕೃತಿ ವಿಚಾರಸಂಕಿರಣ ನಡೆಯಲಿದೆ. ಅರೆಭಾಷೆ ಮೊದ್ದೆ ಪದ್ಧತಿಗಳಲ್ಲಿ ಬದಲಾವಣೆ ವಿಷಯ ಕುರಿತು ಶ್ರೀ ದೊಡ್ಡಣ ಬರೆಮೇಲು, ಸಿದ್ದವೇಶ-ಅರೆಭಾಷಿಕರ ಜಾನಪದ ನೃತ್ಯ ಎಂಬ ವಿಷಯದ ಬಗ್ಗೆ ಜಯಪ್ರಕಾಶ ಕುಕ್ಕೆಟ್ಟಿ, ಅರೆಭಾಷಿಕರ ದೈವರಾಧಾನೆ ಬಗ್ಗೆ ಡಾ. ಕರುಣಾಕರ ನಿಡಿಂಜಿ ಹಾಗೂ ಕೊಡಗಿನ ಅರೆಭಾಷಿಕರ ಹಬ್ಬ ಹರಿದಿನಗಳ ಬಗ್ಗೆ ಡಾ.ದಯಾನಂದ ಕೂಡಕಂಡಿ ಉಪನ್ಯಾಸ ನೀಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ವಾಗ್ಮಿ ಪಟ್ಟಡ ಶಿವಕುಮಾರ್ ವಹಿಸಲಿದ್ದಾರೆ. ಪದವಿ ಕಾಲೇಜಿನ ಉಪಾನ್ಯಾಸಕರಿಗೆ ಒಒಡಿ ಸೌಲಭ್ಯ ನೀಡಲಾಗಿದೆ. ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಚಂದ್ರಶೇಖರ ಪೇರಾಲ್ ಕೆಲಸ ನಿರ್ವಹಿಸಲಿದ್ದಾರೆ ಎಂದು ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net