ಸ್ವಚ್ಛ ಕುಶಾಲನಗರಕ್ಕಾಗಿ ಮನವಿ

ಸ್ವಚ್ಛ ಕುಶಾಲನಗರ ಮತ್ತು ಸ್ವಚ್ಛ ಕಾವೇರಿ ಯೋಜನೆ ಬಗ್ಗೆ ತಕ್ಷಣ ಕ್ರಮಕ್ಕೆ ಆಗ್ರಹಿಸಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ನೇತೃತ್ವದಲ್ಲಿ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ವನಿತಾ ಚಂದ್ರಮೋಹನ್, ಎಂ. ಕೃಷ್ಣ, ಕೊಡಗನ ಹರ್ಷ, ವೈಶಾಖ್ ಮತ್ತಿತರರು ಇದ್ದರು.

Published on
ಕುಶಾಲನಗರ:
ಸ್ವಚ್ಛ ಕುಶಾಲನಗರ ಮತ್ತು ಸ್ವಚ್ಛ ಕಾವೇರಿ ಯೋಜನೆ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ನೇತೃತ್ವದಲ್ಲಿ ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಲಾಯಿತು.
ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಚರಂಡಿ ಮೂಲಕ ಶೌಚಗೃಹದ ತ್ಯಾಜ್ಯ ಹರಿಸಿ ದುರ್ವಾಸನೆ ಮತ್ತು ಕಾವೇರಿ ನದಿಗೆ ನೇರವಾಗಿ ಸೇರ್ಪಡೆಗೊಳ್ಳುತ್ತಿರುವ ಪ್ರಕರಣ, ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯಲ್ಲಿ ನೂರಾರು ಸಂಖ್ಯೆಯ ವಲಸೆ ಬಂದಿರುವ ಕಾರ್ಮಿಕರು ಮತ್ತು ಕೆಲವು ಪ್ರವಾಸಿಗರು ಪಟ್ಟಣದಲ್ಲಿ ಸಾರ್ವಜನಿಕ ಶೌಚಗೃಹ ಸೌಲಭ್ಯ ಇಲ್ಲದೆ ಜೀವನದಿ ಕಾವೇರಿಯನ್ನು ಬಯಲು ಶೌಚ ಗೃಹವನ್ನಾಗಿ ಬಳಸುತ್ತಿರುವುದು, ಐತಿಹಾಸಿಕ ತಾವರೆಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಲಾಯಿತು.
ತಕ್ಷಣ ಸಾರ್ವಜನಿಕ ಪ್ರಕಟಣೆ ನೀಡುವ ಮೂಲಕ ಜನರಿಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದ ಮುಖ್ಯಾಧಿಕಾರಿ ಕುಶಾಲನಗರ ಮತ್ತು ಕಾವೇರಿ ಸ್ವಚ್ಛತೆ ಹಿನ್ನೆಲೆಯಲ್ಲಿ ಪುರಸಭೆಯಿಂದ ವಿಶೇಷ ಸ್ವಚ್ಛತಾ ಸಿಬ್ಬಂದಿ ನಿಯೋಜನೆ ಮಾಡುವ ಭರವಸೆ ನೀಡಿದ್ದಾರೆ. ಕುಶಾಲನಗರ ಪಟ್ಟಣದ ಒಳಚರಂಡಿ ಯೋಜನೆ ಕಾಮಗಾರಿಯನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವುದಾಗಿ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net