ವಿಜಯ್ ಗುರುಸ್ವಾಮಿ ನೇತೃತ್ವದಲ್ಲಿ ಬಾಳೆ ದಿಂಡಿನ ಅಲಂಕೃತ ಮಂಟಪ ನಿರ್ಮಿಸಿ ಶಬರಿ ಗಿರಿವಾಸ ಶ್ರೀ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಇದೇ ವೇಳೆ ಕನ್ನಿ ಪೂಜೆಯನ್ನು ನಡೆಸಲಾಯಿತು. ಬಳಿಕ ನೂರಾರು ವೃತಾಧಾರಿಗಳು ಶರಣು ಕರೆದು ಅಯ್ಯಪ್ಪ ಸ್ವಾಮಿಯ ನಾಮ ಸ್ಮರಣೆಯೊಂದಿಗೆ ಕುದಿಯುವ ತುಪ್ಪದಲ್ಲಿ ಬೇಯುತ್ತಿದ್ದ ಕಜಾಯವನ್ನು ಕೈಯಿಂದ ಹೊರ ತೆಗೆದು ಶ್ರೀ ಅಯ್ಯಪ್ಪನಿಗೆ ಸಮರ್ಪಿಸಿದರು.