ಮಾದಕ ವಸ್ತು ವಿರೋಧಿ ದಿನಾಚರಣೆ ಅಭಿಯಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ವತಿಯಿಂದ ಆರಂಭಿಸಲಾದ ಮಾದಕ ವಸ್ತು ವಿರೋಧಿ ದಿನಾಚರಣೆ ಅಭಿಯಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಠಲ್ ಎಸ್. ಸಾಲ್ಯಾನ್ ಚಾಲನೆ ನೀಡಿದರು. ಎಂ.ಎನ್. ಚಂದ್ರಮೋಹನ್, ಎಚ್.ಎಂ. ರಾಜಶೇಖರ್, ಚಂದ್ರು, ಹನುಮಂತಪ್ಪ ಅಂಗಡಿ ಮತ್ತಿತರರು ಇದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ವತಿಯಿಂದ ಆರಂಭಿಸಲಾದ ಮಾದಕ ವಸ್ತು ವಿರೋಧಿ ದಿನಾಚರಣೆ ಅಭಿಯಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಠಲ್ ಎಸ್. ಸಾಲ್ಯಾನ್ ಚಾಲನೆ ನೀಡಿದರು. ಎಂ.ಎನ್. ಚಂದ್ರಮೋಹನ್, ಎಚ್.ಎಂ. ರಾಜಶೇಖರ್, ಚಂದ್ರು, ಹನುಮಂತಪ್ಪ ಅಂಗಡಿ ಮತ್ತಿತರರು ಇದ್ದರು.
Published on
ಕುಶಾಲನಗರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಸೋಮವಾರಪೇಟೆ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ವತಿಯಿಂದ ಬುಧವಾರ ಮಾದಕ ವಸ್ತು ವಿರೋಧಿ ದಿನಾಚರಣೆ ಅಭಿಯಾನವನ್ನು ಇಲ್ಲಿನ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಠಲ್ ಎಸ್. ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ ವಿಶ್ವ ತಂಬಾಕು ವಿರೋಧಿ ದಿನವನ್ನು ಪ್ರತಿವರ್ಷ ಮೇ 31ರಂದು ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವ ಆರೋಗ್ಯ ಸಂಸ್ಥೆ 1987ರಲ್ಲಿ ಪ್ರಾರಂಭಿಸಿತು. ತಂಬಾಕು ಬಳಕೆಯಿಂದ ಉಂಟಾಗುವ ಆರೋಗ್ಯ ಹಾನಿ, ಆರ್ಥಿಕ ನಷ್ಟ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಾನಪದ ಪರಿಷತ್ತು ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಮಾತನಾಡಿ ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ರೋಗ, ಉಸಿರಾಟದ ಸಮಸ್ಯೆಗಳು ಹಾಗೂ ಅನೇಕ ಗಂಭೀರ ಕಾಯಿಲೆಗಳು ಉಂಟಾಗುತ್ತವೆ. ಸಿಗರೇಟ್, ಬೀಡಿ, ಗುಟ್ಕಾ, ಪಾನ್ ಮಸಾಲಾ ಮುಂತಾದ ತಂಬಾಕು ಉತ್ಪನ್ನಗಳು ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲ, ಕುಟುಂಬ ಮತ್ತು ಸಮಾಜಕ್ಕೂ ಹಾನಿಕಾರಕವಾಗಿವೆ. ನಮ್ಮ ದೇಹದ ಆರೋಗ್ಯ ಜತೆಗೆ ಪರಿಸರ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಚ್.ಎಂ. ರಾಜಶೇಖರ್ ಮಾತನಾಡಿ ಮನುಷ್ಯರೇ ಮನುಷ್ಯರ ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ದುರಾಭ್ಯಾಸ ಕಲಿಸಿದವನಿಗಿಂತ ದುರಾಭ್ಯಾಸ ಕಳಿತವ ಬೇಗನೇ ನಾಶವಾಗುತ್ತಾನೆ. ಇವತ್ತು ವಿದ್ಯಾರ್ಥಿ ಸಮೂಹ ಇಂತಹ ಮಾರಕ ಚಟಗಳಿಗೆ ಬಲಿ ಬೀಳುತ್ತಿರುವುದು ಅತ್ಯಂತ ದುಃಖದ ವಿಚಾರ ಎಂದು ಹೇಳಿದರು.
ವೇದಿಕೆಯ ಇನ್ನೋರ್ವ ಸದಸ್ಯ ಚಂದ್ರು ಮಾತನಾಡಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಹುಬೇಗನೆ ಬಲಿಯಾಗುತ್ತಿದ್ದಾರೆ. ಗಾಂಜಾ ಮುಂತಾದ ಮಾರಕವಾದ ವಸ್ತುಗಳನ್ನು ಸೇವಿಸುವುದರಿಂದ ಸಾವನ್ನಪ್ಪುತ್ತಿರುವುದು ಬೇಸರದ ಸಂಗತಿ. ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಪ್ರಾಯದ ಮಕ್ಕಳೂ ಬಲಿಯಾಗುತ್ತಿದ್ದಾರೆ. ವಾಹನ ಅಪಘಾತವಾಗುತ್ತಿರುವುದು ಮತ್ತು ಎಳೆಯ ವಯಸ್ಸಿನ ಮಕ್ಕಳು ಸಾಯುತ್ತಿರುವುದನ್ನು ಕಂಡರೆ ನಮಗೆ ಇದಕ್ಕೆ ಏನಾದರೂ ಒಂದು ಪರಿಹಾರ ಕಂಡುಕೊಳ್ಳಬೇಕೆAಬ ಮನಸ್ಸಾಗುತ್ತದೆ. ಇವತ್ತು ಜನಜಾಗೃತಿ ವೇದಿಕೆಯು ಇದನ್ನು ಮಾಡುತ್ತಿದೆ. ನಾವೆಲ್ಲರೂ ವೇದಿಕೆಯಲ್ಲಿ ಈ ಬಗ್ಗೆ ಸದಾ ಬೆಂಬಲ ಒಗ್ಗಟ್ಟಾಗಿ ನೀಡುತ್ತೇವೆ ಎಂದರು.
ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಒಕ್ಕೂಟ ಅಧಕ್ಷೆ ಜರೀನಾ, ಪ್ರಾಂಶುಪಾಲ ನಾಗೇಂದ್ರಸ್ವಾಮಿ, ಸೇವಾಪ್ರತಿನಿಧಿ ಶಾಲಿನಿ, ಕನ್ನಡ ಉಪನ್ಯಾಸಕಿ ಸೌಮ್ಯ, ಕುಶಾಲನಗರ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net