ವಾರ್ಷಿಕ ತೆರೆ ಮಹೋತ್ಸವ ಸಂಪನ್ನ

ಶ್ರೀ ಮುತ್ತಪ್ಪ ತೆರೆ ಮಹೋತ್ಸವದ ಬಸುರಿ ಮಾಲ ತೆರೆ.
ಶ್ರೀ ಮುತ್ತಪ್ಪ ತೆರೆ ಮಹೋತ್ಸವದ ಬಸುರಿ ಮಾಲ ತೆರೆ.
Published on

ಪ್ರಮುಖ ಮುಖ್ಯಾಂಶಗಳು

  • ವಿರಾಜಪೇಟೆ-ಬಿಟ್ಟಂಗಾಲ-ಕಂಪನಿಮೊಟ್ಟೆ ಗ್ರಾಮ
  • ಪ್ರಾರ್ಥನಾ ಮಡಪುರ ಶ್ರೀಮುತ್ತಪ್ಪ ದೇವಾಲಯ
ವಿರಾಜಪೇಟೆ: ವಿರಾಜಪೇಟೆ-ಬಿಟ್ಟಂಗಾಲ-ಕಂಪನಿಮೊಟ್ಟೆ ಗ್ರಾಮದ ಪ್ರಾರ್ಥನಾ ಮಡಪುರ ಶ್ರೀಮುತ್ತಪ್ಪ ದೇವಾಲಯದ 34ನೇ ವರ್ಷದ ವಾರ್ಷಿಕ ತೆರೆ ಮಹೋತ್ಸವ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ದೊರೆತಿತ್ತು. ಧ್ವಜಾರೋಹಣ ಬಳಿಕ ಸನಿಹದ ಶ್ರೀ ಕಣ್ಣಂಬಾಡಿ ಅಮ್ಮನವಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಮುತ್ತಪ್ಪನ್ ವೆಳ್ಳಾಟಂ, ಗುಳಿಗನ್ ತೊಟ್ಟಂ ತೆರೆ ನಡೆಯಿತು. ದೇವಾಲಯದ ಅನತಿ ದೂರದಲ್ಲಿ ಬಸುರಿಮಾಲ ದೇವರ ತೊಟ್ಟಂ ತೆರೆಯು ಮುಖ್ಯ ರಸ್ತೆ ಮಾರ್ಗವಾಗಿ ದೇವಾಲಯಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಸೇರಿದಂತೆ ಮಹಿಳೆಯರು ಭಾಗಿಯಾಗಿದ್ದರು.
ಬಳಿಕ ದೇವಾಲಯ ಆವರಣದಲ್ಲಿ ವಿಶೇಷ ಅನ್ನಸಂತರ್ಪಣೆ ನಡೆಯಿತು. ಬುಧವಾರ ಮುಂಜಾನೆ ಗುಳಿಗನ್‌ತೆರೆ, ಶ್ರೀ ಮುತ್ತಪ್ಪನ್, ಶ್ರೀ ತಿರುವಪ್ಪನ್ ತೆರೆಗಳು ಹಾಗೂ ಆಕರ್ಷಕ ಬಸುರಿಮಾಲ ತೆರೆಯೊಂದಿಗೆ ವಾರ್ಷಿಕ ತೆರೆ ಮಹೋತ್ಸವ ಸಂಪನ್ನಗೊಂಡಿತು. ತೆರೆ ಮುಕ್ತಾಯ ಕಂಡ ಬಳಿಕ ಆಗಮಿಕ ಭಕ್ತರಿಗೆ ದೇಗುಲದ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ರಾತ್ರಿ ನಡೆದ ವಿಶೇಷ ಸಿಡಿ ಮದ್ದು ಪ್ರದರ್ಶನ ಭಕ್ತರ ಮನಸೂರೆಗೊಂಡಿತ್ತು.
ಚಿತ್ರ ಅಳವಡಿಸಲಾಗಿದೆ.
1 ಠಿ 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net