ಸೋಮವಾರಪೇಟೆ: ಪಟ್ಟಣದ ಮಹದೇಶ್ವರ ಬ್ಲಾಕ್‌ನ ಶ್ರೀ ಮುನೇಶ್ವರ ಮತ್ತು ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಪೂಜೆ ಬುಧವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಗ್ಗೆಯಿಂದಲೇ ಪೂಜೆ ಹೋಮ-ಹವನಗಳು ನಡೆದವು. ದುರ್ಗಾದೀಪ ನಮಸ್ಕಾರ ನಡೆಯಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಯಿತು.
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಡಾಕ್ಟರ್ ಆಫ್ ಮೆಡಿಸಿನ್(ಆಯುರ್ವೇದ)ನಲ್ಲಿ ಎರಡನೇ ರ‌್ಯಾಂಕ್ ಪಡೆದ ಡಾ.ಎನ್.ಎಂ.ಪಲ್ಲವಿ ಅವರನ್ನು ದೇವಾಲಯ ಸಮಿತಿಯಿಂದ ಸನ್ಮಾನಿಸಲಾಯಿತು. ಎಂ.ಡಿ.ಬ್ಲಾಕ್ ನಿವಾಸಿ, ನಲ್ಲುಲ್ಲಿ ಮೋಹನ್ ಮತ್ತು ಶೋಭಾ ಅವರ ಪುತ್ರಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಸುರೇಶ್, ಗೌರವ ಅಧ್ಯಕ್ಷ ತಿಮ್ಮಶೆಟ್ಟಿ, ಕಾರ್ಯದರ್ಶಿ ಲೋಕೇಶ್, ಖಚಾಂಚಿ ಗೋವಿಂದ ಮತ್ತು ಸಮಿತಿ ಪದಾಧಿಕಾರಿಗಳು ಇದ್ದರು.