ಚೇಂಬರ್ ಆಫ್ ಕಾಮರ್ಸ್‌ನ ವಾರ್ಷಿಕ ಮಹಾಸಭೆ

ಚೇಂಬರ್ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿತರಾದ ಬಿ. ಆರ್. ನಾಗೇಂದ್ರ ಪ್ರಸಾದ್ ಮತ್ತು ಕೆ. ಎಸ್. ವೆಂಕಟರಮಣ ರಾವ್.
ಚೇಂಬರ್ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನಿತರಾದ ಬಿ. ಆರ್. ನಾಗೇಂದ್ರ ಪ್ರಸಾದ್ ಮತ್ತು ಕೆ. ಎಸ್. ವೆಂಕಟರಮಣ ರಾವ್.
Published on
ಕುಶಾಲನಗರ: ಕುಶಾಲನಗರದ ಪಾಳ್ಯಂ ಎಮೆರಾಲ್ಡ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಕುಶಾಲನಗರ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಪಿ. ರಮೇಶ್ ಭಾನುವಾರ ಉದ್ಘಾಟಿಸಿದರು.
ಸಂಸ್ಥೆಯ ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಜಿಲ್ಲಾ ಘಟಕಗಳು ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಸಂಘಟನಾ ಕಾರ್ಯದರ್ಶಿ ಟಿ. ಆರ್. ಶರವಣಕುಮಾರ್ ಮಾತನಾಡಿ, ಎಲ್ಲರೂ ಒಂದಾಗುವ ಮೂಲಕವೇ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟು ಮುಖ್ಯ ಎಂದರು.
ಇದೇ ಸಂದರ್ಭದಲ್ಲಿ 1990 ರಿಂದ 2024 ರ ತನಕ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ಸ್ಥಾನೀಯ ಸಮಿತಿ ಅಧ್ಯಕ್ಷ ಕೆ. ಎಸ್. ನಾಗೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್‌ನ ಪಿ.ಪಿ. ಸತ್ಯನಾರಾಯಣ, ಬಿ.ಜಿ. ಅನಂತಶಯನ, ಕೆ.ಎಸ್.ರಾಜಶೇಖರ್, ವೆಂಕಟರಮಣರಾವ್, ಎಸ್. ಕೆ. ಸತೀಶ್, ಅಮೃತರಾಜ್, ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಪುರಸಭೆಯು ಎರಡು ಲೀಟರ್‌ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಬಳಕೆ ನಿಷೇಧಿಸಿರುವುದನ್ನು ಮರುಚಿಂತನೆ ಮಾಡಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು. ಚೇಂಬರ್ ಕಾರ್ಯದರ್ಶಿ ಚಿತ್ರಾ ರಮೇಶ್ , ಉಪಾಧ್ಯಕ್ಷ ಎಂ. ಡಿ. ರಂಗಸ್ವಾಮಿ, ಕೋಶಾಧಿಕಾರಿ ಎನ್. ವಿ. ಬಾಬು, ಸಹ ಕಾರ್ಯದರ್ಶಿ ಬಿ. ಎಂ. ಅಂಜನ್, ಮಾಜಿ ಅಧ್ಯಕ್ಷ ರವೀಂದ್ರ ರೈ , ನಿರ್ದೇಶಕರು, ಸಲಹಾ ಸಮಿತಿ ಪ್ರಮುಖರು, ಕಾನೂನು ಸಲಹೆಗಾರರು, ಸದಸ್ಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net