ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವ

ಕುಶಾಲನಗರ ರಥಬೀದಿಯಲ್ಲಿರುವ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವದ ಪೂಜೋತ್ಸವ ಸಂದರ್ಭ ಭಕ್ತರು ದೇವಿಯ ದರ್ಶನ ಪಡೆದರು.
ಕುಶಾಲನಗರ ರಥಬೀದಿಯಲ್ಲಿರುವ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವದ ಪೂಜೋತ್ಸವ ಸಂದರ್ಭ ಭಕ್ತರು ದೇವಿಯ ದರ್ಶನ ಪಡೆದರು.
Published on
ಕುಶಾಲನಗರ:
ಕುಶಾಲನಗರದ ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿ, ದೇವಾಂಗ ಸಂಘದ ವತಿಯಿಂದ ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವದ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ವಿವಿಧ ಹೋಮ ಹವನಗಳೊಂದಿಗೆ ಶನಿವಾರ ನಡೆಯಿತು.
ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ 5 ಗಂಟೆಗೆ ಶ್ರೀ ಗಣಪತಿ ಹೋಮ, ಧ್ವಜಾರೋಹಣ ನಂತರ ಸಮುದಾಯದ ಬಾಂಧವರು ಕಾವೇರಿ ನದಿಗೆ ತೆರಳಿ ನದಿಯಲ್ಲಿ ಗಂಗಾಪೂಜೆ ಮಾಡಿ ಕಾವೇರಿ ನದಿಯಿಂದ ಕಳಸ ಹೊತ್ತವರು, ಸೇರಿದಂತೆ ಭಕ್ತರು ನಗರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನಕ್ಕೆ ತಲುಪಲಾಯಿತು. ಈ ಸಂದರ್ಭ ಮೆರವಣಿಗೆ ಜತೆಯಲ್ಲಿ ಜಾನಪದ ವೀರಗಾಸೆ ನೃತ್ಯ, ಮಂಗಳವಾದ್ಯ ಗಮನ ಸೆಳೆಯಿತು.
ಮಧ್ಯಾಹ್ನ 12.30ಕ್ಕೆ ದೇವಾಲಯದಲ್ಲಿ ದೇವಿಗೆ ಪೂಜಾ ವಿಧಿ ವಿಧಾನಗಳು ಸೇರಿದಂತೆ ಅನೇಕ ಪೂಜಾ ಕೈಂಕರ್ಯಗಳು ನಡೆದವು. ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಅನ್ನಸಂರ್ತಪಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ದೇವಾಂಗ ಸಂಘದ ಅಧ್ಯಕ್ಷ ಡಿ.ವಿ. ರಾಜೇಶ್, ಉಪಾಧ್ಯಕ್ಷ ಡಿ.ಆರ್. ಸೋಮಶೇಖರ್, ಡಿ.ವಿ. ಚಂದ್ರು(ರಾಕಿ), ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣಕುಮಾರ್, ಖಜಾಂಚಿ ಡಿ.ಜಿ. ಪ್ರದೀಪ್, ಸಹ ಕಾರ್ಯದರ್ಶಿ ಡಿ. ವಿ. ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಡಿ. ಎನ್. ವಿನೋದ್, ಜಂಟಿ ಕಾರ್ಯದರ್ಶಿ ಡಿ. ಆರ್. ಜಯಂತ್, ಗೌರವ ಸಲಹೆಗಾರರಾದ ಡಿ.ಟಿ. ವಿಜಯೆಂದ್ರ, ಡಿ.ಎಸ್ ಜಗದೀಶ್, ಡಿ.ಎಸ್. ಕೋದಂಡರಾಮ, ಡಿ.ಟಿ. ನಾಗ್ರೇಂದ್ರ, ಡಿ.ಕೆ. ತಿಮ್ಮಪ್ಪ, ಡಿ.ಸಿ. ಜಗದೀಶ್, ಡಿ.ಸಿ. ಪ್ರಭಾಕರ್, ಹೆಚ್. ಎನ್. ಯೋಗೇಶ್, ಮಹಿಳಾ ಅಧ್ಯಕ್ಷರಾದ ಪದ್ಮಮಹೇಶ್, ಪ್ರಮುಖರಾದ ಶುಭ ರವಿಕುಮಾರ್, ರೂಪ ಕುಮಾರ್, ಶೋಭಾ ಅನಿಲ್, ಗೀತಾ ಸೋಮಶೇಖರ್, ಶೋಭ ಸೋಮಶೆಟ್ಟಿ, ಯುವಕ ಸಂಘದ ಡಿ.ಎಸ್. ಯತಿರಾಜ್, ಡಿ.ಪಿ.ಮಧು, ಡಿ. ಪಿ.ಗಣೇಶ್, ಡಿ.ಟಿ. ರವಿಶಂಕರ್, ಡಿ.ವಿ ಲಕ್ಷಿತ್ ಸೇರಿದಂತೆ ಸಮಿತಿಯ ನಿರ್ದೇಶಕರುಗಳು, ಸಂಘದ ಸದಸ್ಯರುಗಳು ಹಾಜರಿದ್ದರು.
ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕರಾದ ಎಂ.ಆರ್. ಪ್ರಸನ್ನ ಕುಮಾರ್ ನೆರವೇರಿಸಿದರು
ಸಂಜೆ 6 ಗಂಟೆಗೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ದೇವಿಯ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಯ ಮುಂದೆ ವೀರಗಾಸೆ ನೃತ್ಯ, ಮಂಗಳ ವಾದ್ಯದೊಂದಿಗೆ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ದೇವಾಲಯದ ಆವರಣದಿಂದ ಬೈಚನಹಳ್ಳಿನವರೆಗೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು. ಪೂಜೋತ್ಸವ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net