

ಅಂಗನವಾಡಿಗೆ ಬರುವ ಪುಟ್ಟಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಪಂಚಾಯಿತಿ ಅನುದಾನ ಉಪಯೋಗಿಸಿ ಅಂಗನವಾಡಿಗಳನ್ನು ಆಕರ್ಷಕವಾಗಿ ರೂಪಿಸಲಾಗುತ್ತಿದೆ. ಪಂಚಾಯಿತಿಯಲ್ಲಿ ಸಂಗ್ರಹ ಆಗುವ ಆರೋಗ್ಯ ಕರದಲ್ಲಿನ ಅನುದಾನ ಬಳಸಿಕೊಂಡು ಅಂಗನವಾಡಿಗಳನ್ನು ಚೆಂದಗೊಳಿಸಲಾಗುತ್ತಿದೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಿಂದ ಇಂಥ ವ್ಯವಸ್ಥೆ ಮಾಡಿಕೊಡಲಾಗುತ್ತದೆ.
— ಎಂ.ಆರ್. ಸುಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗುಡ್ಡೆಹೊಸೂರು
ನಮ್ಮ ಊರಿನ ಅಂಗನವಾಡಿ ಈಗ ಅತ್ಯಂತ ಸುಂದರ ಮತ್ತು ಸುರಕ್ಷಿತವಾಗಿ ಬದಲಾಗಿದೆ. ಮಕ್ಕಳನ್ನು ಕಳುಹಿಸಲು ಪೋಷಕರಾಗಿ ನಮಗೆ ಹೆಮ್ಮೆಯೆನಿಸುತ್ತಿದೆ. ಗ್ರಾಮ ಪಂಚಾಯಿತಿಯು ಮೂಲಸೌಕರ್ಯದ ಜತೆಗೆ ಶೈಕ್ಷಣಿಕ ಗುಣಮಟ್ಟ ಕಾಪಾಡಲು ತೋರುತ್ತಿರುವ ಕಾಳಜಿ ಮಾದರಿಯಾಗಿದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಿ, ಗ್ರಾಮೀಣ ಶಿಕ್ಷಣಕ್ಕೆ ಹೊಸ ಮೆರುಗು ನೀಡಿದ ಗ್ರಾಮ ಪಂಚಾಯಿತಿ ಮತ್ತು ಅಂಗನವಾಡಿ ಸಿಬ್ಬಂದಿಗೆ ಶ್ರಮ ಶ್ಲಾಘನೀಯ.
— ಕುಸುಮಾವತಿ, ಪೋಷಕರು, ಗುಡ್ಡೆಹೊಸೂರು