ತೀಯಾನ್ ಮಹಾಸಭಾಕ್ಕೆ ಎ.ಎನ್. ಪದ್ಮನಾಭ ಅಧ್ಯಕ್ಷ

ತೀಯಾನ್ ಮಹಾಸಭಾದ ಕೊಡಗು ಜಿಲ್ಲಾ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್.ಆರ್. ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಅರುಣ್, ಎನ್.ಸಿ. ಸುದರ್ಶನ್, ಎಂ. ಕೆ.ಮೋಹನ್ ಮತ್ತಿತರರು ಇದ್ದರು.
ತೀಯಾನ್ ಮಹಾಸಭಾದ ಕೊಡಗು ಜಿಲ್ಲಾ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್.ಆರ್. ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಅರುಣ್, ಎನ್.ಸಿ. ಸುದರ್ಶನ್, ಎಂ. ಕೆ.ಮೋಹನ್ ಮತ್ತಿತರರು ಇದ್ದರು.
Published on
ಮಡಿಕೇರಿ:
ತೀಯಾನ್ ಮಹಾಸಭಾದ ಕೊಡಗು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಎನ್. ಪದ್ಮನಾಭ ಕಿರಗಂದೂರು ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಆರ್. ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಅರುಣ್, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಸಿ. ಸುದರ್ಶನ್ ಹಾಗೂ ಖಜಾಂಚಿಯಾಗಿ ಎಂ. ಕೆ.ಮೋಹನ್ ಅವರನ್ನು ಆಯ್ಕೆ ಮಾಡಲಾಗಿದೆ.
ಗೌರವ ಸಲಹೆಗಾರರಾಗಿ ಮಡಿಕೇರಿಯ ಲೆಕ್ಕ ಪರಿಶೋಧಕÀ ಟಿ.ಕೆ. ಸುಧೀರ್, ನಿರ್ದೇಶಕರಾಗಿ ಶಶಿಕುಮಾರ್, ಎನ್.ಸಿ. ಸುನಿಲ್, ಗಣೇಶ್, ವೀಣಾ ಜಯರಾಮ್ ಹಾಗೂ ಕಾನೂನು ಸಲಹೆಗಾರರಾಗಿ ವಿರಾಜಪೇಟೆಯ ಕೆ. ವಿ.ಸುನಿಲ್ ಆಯ್ಕೆ ಆದರು.
ಇದೇ ಸಂದರ್ಭ ಜಿಲ್ಲಾ ಯೂತ್ ಅಧ್ಯಕ್ಷರನ್ನಾಗಿ ಶಜಿ ಭರತ್ ಹಾಗೂ ಉಪಾಧ್ಯಕ್ಷರನ್ನಾಗಿ ಪ್ರವೀಣ್ ಅವರನ್ನು ಆಯ್ಕೆ ಮಾಡಲಾಯಿತು. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಈಚೆಗೆ ನಡೆದ ತೀಯಾನ್ ಮಹಾಸಭಾದ ಜಿಲ್ಲಾ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘಟನೆಯ ಬಲವರ್ಧನೆ ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net