ಮುಂದಿನ ಸಾಲಿನ ಕೊಡವ ಹಾಕಿ ನಮ್ಮೆ ಹಿನ್ನೆಲೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಅಜ್ಜಿಕುಟ್ಟಿರ ನರೇನ್, ಪಾಂಡAಡ ಬೋಪಣ್ಣ ಮತ್ತಿತರರು ಇದ್ದರು.
Published on:
Copied
Follow Us
ಗೋಣಿಕೊಪ್ಪಲು:
ಅಜ್ಜಿಕುಟ್ಟಿರ ಕುಟುಂಬದ ಆತಿಥ್ಯದಲ್ಲಿ ಮುಂದಿನ ಸಾಲಿನ ಕೊಡವ ಹಾಕಿ ಹಬ್ಬ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಗೋಣಿಕೊಪ್ಪಲುವಿನಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು.
ಅಜ್ಜಿಕುಟ್ಟಿರ ಕುಟುಂಬದ ಹಾಕಿ ನಮ್ಮೆ ಆಯೋಜನೆಯ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ಭಾಗವಹಿಸಿದ್ದ ಈ ಸಭೆಯಲ್ಲಿ ಮಾತನಾಡಿದ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮುಂದಿನ ಸಾಲಿನಲ್ಲಿ ವಿಜೃಂಭಣೆಯಿAದ ಹಾಕಿ ನಮ್ಮೆ ನಡೆಸುವ ನಿಟ್ಟಿನಲ್ಲಿ ಹಲವು ಅಮೂಲ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಅಜ್ಜಿಕುಟ್ಟಿರ ಕುಟುಂಬದ ಹಾಕಿ ನಮ್ಮೆ ಅಧ್ಯಕ್ಷ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಮಾತನಾಡಿ ಹಾಕಿ ಪಂದ್ಯಾವಳಿಯನ್ನು ಅಭೂತಪೂರ್ವವಾಗಿ ನಡೆಸುವುದರೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಂತೆ ಎಲ್ಲರೂ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಕೊಡವ ಹಾಕಿ ಅಕಾಡೆಮಿ ಸಹಭಾಗಿತ್ವದಲ್ಲಿ ಈ ಸಭೆ ಆಯೋಜನೆಗೊಂಡಿದ್ದು ಪಂದ್ಯಾವಳಿ ಯಶಸ್ಸಿಗೆ ಎಲ್ಲರ ಸಹಕಾರ ಬೇಕೆಂಬ ಒಮ್ಮತದ ಅಭಿಪ್ರಾಯಕ್ಕೆ ಬರಲಾಯಿತು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಅಕಾಡೆಮಿ ಸದಸ್ಯರು, ನಿರ್ದೇಶಕರು, ಅಜ್ಜಿಕುಟ್ಟಿರ ಕುಟುಂಬದ ಸದಸ್ಯರು ಹಾಗೂ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.