ಕೃಷಿಯೇ ಕೊಡವ ಸಂಸ್ಕೃತಿಯ ಮೂಲ

 ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಗೋಣಿಕೊಪ್ಪಲು ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಶನ್‌ನಲ್ಲಿ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣಗೊಳಿಸಲಾಯಿತು. ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಅಜ್ಜಿಕುಟ್ಟಿರ ಸಿ. ದೇವಯ್ಯ, ಮೂಕಳಮಡ ಸುಬ್ರಮಣಿ, ಅಯ್ಯಂಡ ಪೂವಯ್ಯ, ಮಾಳೇಟಿರ ಗಣಪತಿ ಇತರರಿದ್ದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಗೋಣಿಕೊಪ್ಪಲು ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಶನ್‌ನಲ್ಲಿ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣಗೊಳಿಸಲಾಯಿತು. ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಅಜ್ಜಿಕುಟ್ಟಿರ ಸಿ. ದೇವಯ್ಯ, ಮೂಕಳಮಡ ಸುಬ್ರಮಣಿ, ಅಯ್ಯಂಡ ಪೂವಯ್ಯ, ಮಾಳೇಟಿರ ಗಣಪತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹೇಳಿಕೆ
ಗೋಣಿಕೊಪ್ಪಲು: ಕೊಡವರು ಮೂಲತಃ ಕೃಷಿಕರಾಗಿದ್ದು, ಕೃಷಿಯೇ ಜೀವನಾಧಾರ, ಕೃಷಿಯೇ ಸಂಸ್ಕೃತಿಯ ಮೂಲ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹೇಳಿದರು.
ಗೋಣಿಕೊಪ್ಪಲು ಶ್ರೀ ಇಗ್ಗುತಪ್ಪ ಕೊಡವ ಅಸೋಸಿಯೇಶನ್‌ನಲ್ಲಿ ಬುಧವಾರ ಆಯೋಜಿಸಿದ್ದ ಅಕಾಡೆಮಿಯ 21ನೇ ಕೊಡವ ಪುಸ್ತಕ ಪತ್ತಾಯ ಅನಾವರಣದಲ್ಲಿ ಮಾತನಾಡಿದರು.
ಕೈಲ್‌ಪೊವ್ದ್, ಕಾವೇರಿ ಚಂಗ್ರಾಂದಿ ಹಾಗೂ ಪುತ್ತರಿ ಹಬ್ಬಗಳು ಕೃಷಿಯಾಧಾರಿತವಾಗಿದೆ. ಕೊಡವರ ಮದುವೆಗಳಲ್ಲಿ ಸಮ್ಮಂದ ಅಡ್‌ಕುವ ಪದ್ಧತಿಗೆ ಬಹಳ ಪ್ರಾಮುಖ್ಯತೆ ಹಾಗೂ ಪ್ರಾಶಸ್ತ್ಯವಿದೆ. ಇದರಲ್ಲಿ ಬರುವ ಪದ ಸಾಲುಗಳೆಲ್ಲವೂ ಕೃಷಿಯನ್ನು ಉಲ್ಲೇಖಿಸುತ್ತದೆ. ಕ್ರೋಢದೇಶದ ಆರಂಭವೇ ಕೃಷಿಗೆ ಹೊಂದಿಕೊಂಡಿದ್ದು, ಆ ಯುಗದ ಕೊಡವ ಹಿರಿಯರು ಸ್ವತಃ ಕೈಯ್ಯರೆ ಭೂಮಿಯನ್ನು ಉಳುಮೆ ಮಾಡಿ ಕೃಷಿಗೆ ತಕ್ಕಂತೆ ಹದಗೊಳಿಸಿದ್ದು ಉಲ್ಲೇಖವಾಗಿದೆ ಎಂದರು.
ಕೊಡಗಿನ ಕೃಷಿಭೂಮಿಗಳು ಇತ್ತೀಚಿನ ವರ್ಷಗಳಲ್ಲಿ ಪರಭಾರೆಗೊಳ್ಳುತ್ತಿರುವುದು ಆತಂಕ ಮೂಡಿಸುತ್ತಿದೆ. ಕೃಷಿಭೂಮಿಯನ್ನು ಪರಭಾರೆ ಮಾಡುವ ನೈತಿಕತೆ ಯಾವುದೇ ಕೊಡವನಿಗೆ ಇಲ್ಲ. ಸಂಪಾದಿಸಿದ ಆಸ್ತಿಯನ್ನು ಮಾತ್ರ ಪರರಿಗೆ ಮಾರಬಹುದಷ್ಟೇ. ಪಿತ್ರಾರ್ಜಿತ ಆಸ್ತಿಯನ್ನು ಮಾರುವಂತಿಲ್ಲ ಎಂದರು.
ಕೊಡವ ಪುಸ್ತಕ ಪತ್ತಾಯ ಅನಾವರಣಗೊಳಿಸಿದ ಶ್ರೀ ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಸಿ. ದೇವಯ್ಯ ಮಾತನಾಡಿ, ಪುಸ್ತಕ ಓದುವ ಅಭ್ಯಾಸ ಮರುಕಳಿಸುವಂತಾಗಬೇಕು. ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇಂತಹ ಸಾಹಿತ್ಯಪರ ಕಾರ್ಯಕ್ರಮಗಳು ನಡೆಯುತ್ತಿರುವುದು ಪುಸ್ತಕ ಪ್ರೇಮಿಗಳಿಗೆ ಅನುಕೂಲಕರವಾಗಿದೆ ಎಂದು ಹೇಳಿದರು.
ಶ್ರೀ ಇಗ್ಗುತಪ್ಪ ಕೊಡವ ಸಂಘದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದ ನೋಂದಣಿ ಬಾಪ್ತು ಹತ್ತು ಸಾವಿರ ರೂ. ಚೆಕ್ ಅನ್ನು ಅಕಾಡೆಮಿ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ಸಂಘದ ಅಧ್ಯಕ್ಷರಿಗೆ ನೀಡಲಾಯಿತು. ನಂತರ ಶ್ರೀ ಇಗ್ತುತಪ್ಪ ಕೊಡವ ಸಂಘ ಹಾಗೂ ಚೋಡುಮಡ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಮೂಕಳಮಡ ಸುಬ್ರಮಣಿ, ಖಜಾಂಚಿ ಅಯ್ಯಂಡ ಪೂವಯ್ಯ, ನಿರ್ದೇಶಕರುಗಳಾದ ಮಾಳೇಟಿರ ಗಣಪತಿ, ಚೋಡುಮಡ ರಾಜ ಅಯ್ಯಣ್ಣ, ಚೊಟ್ಟೆಯಂಡಮಡ ಅರುಣ್, ಚೋನಿರ ಮಂಜು ಮುತ್ತಣ್ಣ, ಮಲ್ಲಂಡ ಸುರೇಶ್, ನೆಲ್ಲಮಕ್ಕಡ ಪ್ರೇಮ, ಚೆರಿಯಪಂಡ ಲತ ಪೂಣಚ್ಚ, ಮೇಕೇರಿರ ಖಾನ, ಕುಪ್ಪಂಡ ಗಣೇಶ, ಅಕಾಡೆಮಿ ಸದಸ್ಯರಾದ ನಾಯಂದಿರ ಆರ್. ಶಿವಾಜಿ, ಪೊನ್ನಿರ ಯು. ಗಗನ್, ನೂರೆರ ಧನ್ಯ ರವೀಂದ್ರ, ಪುಚ್ಚಿಮಂಡ ರೇಖ, ಬೆಂಜಂಡ ರಶ್ಮಿ ದೇವಯ್ಯ, ಶಾಂತೆಯಂಡ ಮಧು, ಚೋಡುಮಡ ರಾಜ ಅಯ್ಯಣ್ಣ, ಚೋನಿರ ಸತ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net