ಪ್ರತಿವರ್ಷ ಬಳ್ಳಿಗಳಿಲ್ಲದ ಮರಗಳಿಗೆ ಹೊಸ ಬಳ್ಳಿಗಳನ್ನು ನಾಟಿ ಮಾಡುತ್ತಾರೆ. ಇದರೊಂದಿಗೆ ವಾರ್ಷಿಕವಾಗಿ ಅಡಿಕೆ, ತೆಂಗಿನ ಕೃಷಿಯಿಂದಲು ಉತ್ತಮ ಆದಾಯವನ್ನು ಉದಯ್ ಕುಮಾರ್ ಗಳಿಸಿಕೊಳ್ಳುತ್ತಿದ್ದಾರೆ. ತೋಟದ ಬದುಗಳಲ್ಲಿ ಹಾಗೂ ತೋಟದ ನಡುವಿನ ಮಾರ್ಗದ ಬದಿಯಲ್ಲಿ ಸಪೋಟಾ, ಸೀಬೆ, ಮಾವು , ನೇರಳೆ, ಕೈಹುಳಿ, ಲಿಂಬೆಗಿಡ, ಕಿತ್ತಳೆ, ಬಟರ್ ಫ್ರೂಟ್, ಹಲಸು, ಪಪ್ಪಾಯಿ ಹಾಗೂ ವಿವಿಧ ತಳಿಯ ಬಾಳೆಯ ಗಿಡಗಳನ್ನು ಬೆಳೆಸಿರುವುದು ವಿಶೇಷ. ಇವುಗಳಿಂದಲೂ ಆದಾಯವನ್ನು ಗಳಿಸುತ್ತಾ ಹಲವರಿಗೆ ಮಾದರಿ ಆಗಿದ್ದಾರೆ.