ಗುಹ್ಯ ಗ್ರಾಮದಲ್ಲಿ ಅಗ್ನಿದೇವಿ ಉತ್ಸವ

 ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಶ್ರೀ ಅಗ್ನಿದೇವಿ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಪಾಷಣಮೂರ್ತಿ ಹಾಗೂ ಮಂತ್ರದೇವತೆ ದೈವಗಳ ನೇಮೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಶ್ರೀ ಅಗ್ನಿದೇವಿ ದೇವಾಲಯದ ವಾರ್ಷಿಕ ಉತ್ಸವದ ಅಂಗವಾಗಿ ಪಾಷಣಮೂರ್ತಿ ಹಾಗೂ ಮಂತ್ರದೇವತೆ ದೈವಗಳ ನೇಮೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
Published on
ಸಿದ್ದಾಪುರ : ಸಮೀಪದ ಗುಹ್ಯ ಗ್ರಾಮದ ಶ್ರೀ ಅಗ್ನಿದೇವಿ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶುಕ್ರವಾರ ನೆರವೇರಿತು.
ಉತ್ಸವದ ಅಂಗವಾಗಿ ಪಾಷಣಮೂರ್ತಿ ಹಾಗೂ ಮಂತ್ರದೇವತೆ ದೈವಗಳ ನೇಮೋತ್ಸವವು ಎರಡು ದಿನಗಳ ಕಾಲ ಭಕ್ತಿಭಾವದಿಂದ ಸಂಪನ್ನಗೊಂಡಿತು. ಬೆಳಗ್ಗೆ ಗಣಪತಿ ಹೋಮ, ಮಂಗಳಾರತಿ ನೆರವೇರಿಸಿ, ನೆರೆದಿದ್ದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ದೇವಿಯ ವಿಶೇಷ ಪೂಜೆಗಳಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
ರಾತ್ರಿ ವೇಳೆಯಲ್ಲಿ ಪರಿವಾರ ದೈವಗಳಾದ ಪಾಷಣಮೂರ್ತಿ ಹಾಗೂ ಮಂತ್ರದೇವತೆ ದೈವಗಳ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿ ಆಶೀರ್ವಾದ ಪಡೆದುಕೊಂಡರು. ನೇಮೋತ್ಸವದಲ್ಲೂ ಭಾರೀ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಉತ್ಸವದ ಅಂಗವಾಗಿ ಅನ್ನದಾನ ನೆರವೇರಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net