ದವಸ ಭಂಡಾರಗಳು ದ.ಕೊಡಗಿನಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿವೆ. ಪರಸ್ಪರ ನಂಬಿಕೆ ಮೂಲಕ ಆರಂಭವಾದ ಧವಸ ಭಂಡಾರಗಳು ಬೆಳವಣಿಗೆಯತ್ತ ಸಾಗುತ್ತಿದೆ. ಭಾರತದಲ್ಲಿ 8.50 ಲಕ್ಷ ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿವೆ. 3 ಕೋಟಿ ಸಹಕಾರಿಗಳು ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದಿದ್ದಾರೆ. ಕೊಡಗಿನ ತಲ್ತಾರೆ ಶೆಟ್ಟಳ್ಳಿ ಆರಂಭದಲ್ಲಿ ಸಹಕಾರ ಸಂಘ ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೆಂಬರ್ ತಿಂಗಳಿನಲ್ಲಿ ದೇಶಾದ್ಯಾಂತ ಸಹಕಾರ ಸಪ್ತಾಹವು ಏಕಕಾಲದಲ್ಲಿ 7 ದಿನಗಳ ಕಾಲ ನಡೆಯುತ್ತಿದೆ. ಇದರಿಂದ ಸಹಕಾರಿಗಳ ಪರಸ್ಪರ ಭೇಟಿಗೆ ವೇದಿಕೆ ಒದಗಿಸಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ, ಕೊಡಗಿನಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿವೆ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಒತ್ತು ನೀಡಲಾಗುತ್ತಿದೆ. ಹಲವು ಸಂಘಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಗಮನಿಸಿದ್ದೇವೆ. ಅಂತಹ ಸಂಘಗಳಿಗೆ ಸಲಹೆ ಸೂಚನೆ ನೀಡುವ ಮೂಲಕ ಪ್ರಗತಿಯತ್ತ ಸಾಗಲು ನಿರ್ದೇಶನಗಳನ್ನು ನೀಡಲಾಗುತ್ತಿದೆ. ಕಾನೂರು ಸಹಕಾರ ಸಂಘವು ತನ್ನದೆ ಆದ 50 ಏಕರೆ ಕಾಫಿ ತೋಟ ಹೊಂದಿರುವುದು ಶ್ಲಾಘನೀಯ. ಹಿರಿಯ ಸಹಕಾರಿಗಳು ಅಂದಿನ ಕಾಲದಲ್ಲಿ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ಇಂತಹ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದರು. ಅಂತಹ ಸಹಕಾರಿಗಳನ್ನು ಇಂದು ನೆನೆಸಿಕೊಳ್ಳುವ ಅವಕಾಶ ನಮ್ಮೆಲ್ಲರಿಗೆ ಒದಗಿ ಬಂದಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕನ್ನು ಮೀರಿಸಿ ಸಹಕಾರ ಸಂಘಗಳು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಸಾಲ ಸೌಲಭ್ಯ ನೀಡುತ್ತಿವೆ. ಸಹಕಾರ ಸಪ್ತಾಹದಲ್ಲಿ ಜನರು ನಿರೀಕ್ಷೆಗೂ ಮೀರಿ ಆಗಮಿಸುತ್ತಿರುವುದು ಸಹಕಾರ ಸಂಘದ ಮೇಲಿರುವ ನಂಬಿಕೆಯ ಪ್ರತೀಕವಾಗಿದೆ. ಇಂತಹ ನಂಬಿಕೆಯನ್ನು ಆಡಳಿತ ಮಂಡಳಿ ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ಆಡಳಿತ ಮಂಡಳಿ ಮೇಲಿದೆ ಎಂದರು.
ಕಾನೂರು ಪಿಎಸಿಸಿಎಸ್ ಅಧ್ಯಕ್ಷ ಕಾಡ್ಯಮಾಡ ಎಸ್.ಭರತ್(ಮಾಚು) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿಗಳಾದ ಮಚ್ಚಮಾಡ ಕಂದಾ ಭೀಮಯ್ಯ,ರಾಜೀವ್ ಬೋಪಯ್ಯ ತಮ್ಮ ಅಭಿಪ್ರಾಯವನ್ನು ಸಭೆಯ ಮುಂದಿಟ್ಟರು. ಕಾರ್ಯಕ್ರಮದ ಅಂಗವಾಗಿ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. ದಿನದ ಮಹತ್ವ ಕುರಿತು ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕಿ ನಿವೃತ್ತ ಪ್ರಾಂಶುಪಾಲೆ ಎಂ.ಎಂ.ಶ್ಯಾಮಲ ವಿಷಯ ಮಂಡನೆ ಮಾಡಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಅಡ್ಡಂಡ ಸಿ.ಕುಶಾಲಪ್ಪ, ಮೂಕಚಂಡ ಟಿ.ಸುಬ್ಬಯ್ಯ, ಅಜ್ಜಿಕುಟ್ಟಿರ ಎಂ.ಮುತ್ತಪ್ಪ, ಹೊಟ್ಟೆಂಗಡ ಎಂ.ರಮೇಶ್, ಎಸ್.ಆರ್.ಸುನೀಲ್ ರಾವ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರಾದ ಕುಂಞಂಗಡ ಅರುಣ್ ಭೀಮಯ್ಯ, ಗುಮ್ಮಟ್ಟಿರ ಕಿಲನ್ ಗಣಪತಿ, ಕಾನೂರು ಪಿಎಸಿಸಿಎಸ್ ಅಧ್ಯಕ್ಷ ಕಾಡ್ಯಮಾಡ ಭರತ್, ಉಪಾಧ್ಯಕ್ಷ ಚಿರಿಯಪಂಡ ಈಶ ಬೆಳ್ಳಿಯಪ್ಪ, ಜಿಲ್ಲಾ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ, ಶಮ್ಮಿಪೂಣಚ್ಚ, ಕುಸುಮಾ, ಸುಮಿತ್ರಾ ಸುರೇಶ್, ಯೋಗೇಂದ್ರ ನಾಯಕ್ ಇತರರು ಇದ್ದರು.