ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ಸಂಸ್ಥೆಯ ಮಡಿಕೇರಿ ಘಟಕವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು. ಎಂ.ಕೆ. ನೌಶಾದ್, ಡಾ. ಕರುಂಬಯ್ಯ, ತೆನ್ನಿರ ಮೈನಾ ಮತ್ತಿತರರು ಇದ್ದರು.
ಉತ್ತಮ ಆರೋಗ್ಯ ಪಡೆಯುವುದು ಪ್ರತಿಯೊಬ್ಬ ಮನುಷ್ಯನ ಅಜನ್ಮ ಸಿದ್ಧ ಹಕ್ಕಾಗಿದ್ದು, ವ್ಯಕ್ತಿ ಆರೋಗ್ಯವಂತನಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ದೇಶದಾದ್ಯಂತ ಸೇವೆ ಸಲ್ಲಿಸುತ್ತಿರುವ ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ (ಎ.ಐ.ಕೆ.ಎಂ.ಸಿ.ಸಿ) ಸಂಸ್ಥೆಯ ಮಡಿಕೇರಿ ಘಟಕವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.
ಎ.ಐ.ಕೆ.ಎಂ.ಸಿ.ಸಿ. ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸಂಘ ಸಂಸ್ಥೆಗಳು ಜನರ ಆರೋಗ್ಯದ ವಿಚಾರದಲ್ಲಿ ಕಾಳಜಿ ಮತ್ತು ಜಾಗೃತಿ ವಹಿಸಬೇಕು. ಸರ್ಕಾರ ಕೂಡ ಜನರ ಆರೋಗ್ಯ ಕ್ಕೆ ಸಂಬAಧಿದAತೆ ಪ್ರತಿ ಜಿಲ್ಲೆಯಲ್ಲಿ ಆಸಕ್ತಿ ಇರುವ ಸಂಘ ಸಂಸ್ಥೆಗಳನ್ನು ಗುರುತಿಸಿ ನೆರವು ನೀಡಲು ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ನೌಶಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಎ.ಐ.ಕೆ.ಎಂ.ಸಿ.ಸಿ. ಸಂಸ್ಥೆ ದೇಶದಲ್ಲಿ ಒಟ್ಟು 117 ಸಂಸ್ಥೆಗಳನ್ನು ಹೊಂದಿದ್ದು 14,700 ಜನ ಸ್ವಯಂ ಸೇವಕರು ಆರ್ಥಿಕ ವಾಗಿ ದುರ್ಬಲವಾಗಿರುವ ರೋಗಿಗಳ ಮನೆಗೆ ಹೋಗಿ ಅವರ ಸೇವೆ ಮಾಡುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ರೋಗಿಗಳು ಸಹಾಯ ನೆರವು ಕೋರಿದಲ್ಲಿ ಸ್ಪಂದನೆ ನೀಡಲು ಸಿದ್ದರಾಗಿರುವುದಾಗಿ ಹೇಳಿದರಲ್ಲದೆ ಕೊಡಗು ಜಿಲ್ಲೆಯಲ್ಲಿ
1200 ಬೆಡ್ ಪೇಷೆಂಟ್ ಗಳ ಯೋಗಕ್ಷೇಮವನ್ನು ನಿರಂತರವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
. ಕೊಡಗು ರಕ್ತನಿಧಿ ಘಟಕದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ ಸಂಸ್ಥೆಯ ಆರಂಭವನ್ನು ರಕ್ತದಾನದ ಮೂಲಕ ಪ್ರಾರಂಭಿಸಿರುವುದು ಇತರ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ ಎ.ಐ.ಕೆ.ಎಂ.ಸಿ.ಸಿ ಸಂಸ್ಥೆ ಕ್ಲಿಷ್ಟಕರ ಆರೋಗ್ಯ ಎದುರಿಸುತ್ತಿರುವ ರೋಗಿಗಳನ್ನು ನಿರಂತರವಾಗಿ ಉಪಚರಿಸುವ ಅದ್ಭುತ ಕಾರ್ಯ ಮಾಡುತ್ತಿದ್ದು ಇದು ದೇವರು ಕೂಡ ಮೆಚ್ಚುವ ಕೆಲಸವಾಗಿದೆ ಎಂದರು.
ಸಂಸ್ಥೆಯ ಮುಖ್ಯಸ್ಥ ಅಬ್ದುಲ್ ಗಫೂರ್, ಘಟಕದ ಅಧ್ಯಕ್ಷ ರಿಯಾಜ್, ಪ್ರಧಾನ ಕಾರ್ಯದರ್ಶಿ ಶಮೀರ್, ಯಾಕುಬ್, ಪ್ರಮುಖರಾದ ಪ್ರಕಾಶ್ ಆಚಾರ್ಯ, ಕಲೀಲ್ ಬಾಷ, ಕೋಚನ ಚೇತನ್, ಎಂ.ಎ. ನಿಷಾರ್ ಮತ್ತಿತರರು ಇದ್ದರು.