ಸುಂಟಿಕೊಪ್ಪ ಸರ್ಕಾರಿ ಶಾಲೆಗಳ ಸಾಧನೆ

ಕೆ.ಐ.ಸಿಂಚನಾ
ಕೆ.ಐ.ಸಿಂಚನಾ
Published on

ಪ್ರಮುಖ ಮುಖ್ಯಾಂಶಗಳು

  • ಶಾಂತಿ ನಿಕೇತನ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಐ.ಸಿಂಚನಾಗೆ 621 ಅಂಕ
ಸುಂಟಿಕೊಪ್ಪ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿಯ ಶಾಂತಿ ನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಐ.ಸಿಂಚನಾ 621 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಇದೇ ಶಾಲೆಯ ವಿದ್ಯಾರ್ಥಿ ರೇನಿತ್ 617 ಅಂಕ ಗಳಿದ್ದಾನೆ.
ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲೆ ವಿಭಾಗ), ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜು, 7ನೇ ಹೊಸಕೋಟೆ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿದೆ.
ಸುಂಟಿಕೊಪ್ಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದಿದ್ದ 33 ಮಕ್ಕಳು ಉತ್ತೀರ್ಣರಾಗಿದ್ದು ಶೇ.100 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಉನ್ನತ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 12, ದ್ವಿತೀಯ ಶ್ರೇಣಿಯಲ್ಲಿ 13, ತೃತೀಯ ಶ್ರೇಣಿಯಲ್ಲಿ ಐವರು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ರೋಜಾ 559 ಅಂಕಗಳಿಸುವುದರೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ವೈಷ್ಣವಿ 536 ಅಂಕವನ್ನು ಗಳಿಸಿಕೊಂಡಿದ್ದಾರೆ. ತೃತೀಯ ಸ್ಥಾನವನ್ನು ಮೊಹಮದ್ ಅನಾಸ್ 533 ಅಂಕಗಳನ್ನು ಪಡೆಯುವ ಶಾಲೆಗೆ ಉತ್ತಮ ಸಾಧನೆ ತೋರಿದ್ದಾರೆ.
7ನೇ ಹೊಸಕೋಟೆ ಸರಕಾರಿ ಪ್ರಾಢಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ 24 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು, ಉನ್ನತ ಶ್ರೇಣಿಯಲ್ಲಿ ಒಬ್ಬ ವಿದ್ಯಾರ್ಥಿನಿ, ಪ್ರಥಮ ಶ್ರೇಣಿಯಲ್ಲಿ 15, ದ್ವಿತೀಯ ಶ್ರೇಣಿಯಲ್ಲಿ 5 ಹಾಗೂ ತೃತೀಯ ಶ್ರೇಣಿಯಲ್ಲಿ ಮೂವರು ಪಾಸ್ ಆಗಿದ್ದಾರೆ.
ಕಾನ್‌ಬೈಲ್ ಸರ್ಕಾರಿ ಪ್ರಾಢಶಾಲೆಗೂ ಶೇ.100ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದಿದ್ದ ಐವರು ಉತ್ತೀರ್ಣರಾಗಿದ್ದಾರೆ. ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 43 ವಿದ್ಯಾರ್ಥಿಗಳ ಪೈಕಿ 41 ಮಕ್ಕಳು ಉತ್ತೀರ್ಣರಾಗಿದ್ದಾರೆ. 7 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ಪ್ರಥಮ ಶ್ರೇಣಿಯಲ್ಲಿ 26, ದ್ವಿತೀಯ ಶ್ರೇಣಿಯಲ್ಲಿ 7 ವಿದ್ಯಾರ್ಥಿಗಳು, ತೃತೀಯ ಶ್ರೇಣಿಯಲ್ಲಿ ಒಬ್ಬರು ಉತ್ತೀರ್ಣರಾಗಿದ್ದಾರೆ. ಶಾಲೆ ಶೇಕಡ 95.34 ಪಡೆದುಕೊಂಡಿದೆ. ಶಾಲೆ ವಿದ್ಯಾರ್ಥಿನಿ ಶ್ರೀಶಾ 599 ಅಂಕಗಳಿಸಿ ಸಾಧನೆ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net