ಲೀಗ್ ಹಂತದಲ್ಲಿ ಡಿಫೆನ್ಸ್ ಕೆರಿಯರ್ ಅಕಾಡೆಮಿ ವಿರುದ್ಧ ೧೮-೦ ಹಾಗೂ ಡೆಲ್ಲಿ ಪಬ್ಲಿಕ್ ಸ್ಕೂಲ್ ಮೈಸೂರು ವಿರುದ್ಧ ೬-೦ ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿದ ಬಾಲಕಿಯರ ತಂಡ, ಸೆಮಿಫೈನಲ್‌ನಲ್ಲಿ ಬೆಂಗಳೂರಿನ ಜನನ ಸ್ವೀಕರ್ ತಂಡವನ್ನು ೬-೦ ಗೋಲುಗಳಿಂದ ಮಣಿಸಿ ಫೈನಲ್ ತಲುಪಿತು. ಫೈನಲ್‌ನಲ್ಲಿ ಆತಿಥೇಯ ಕೊಲ್ಹಾಪುರದ ಸಂಜೀವನ್ ಶಾಲೆ ತಂಡವನ್ನು ೪-೩ ಗೋಲುಗಳ ರೋಚಕ ಅಂತರದಿAದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು. ಬಾಲಕಿಯರ ತಂಡವನ್ನು ಲಕ್ಷ್ಯ ಪೊನ್ನಕ್ಕ ನಾಯಕಿಯಾಗಿ ಮುನ್ನಡೆಸಿದರು.