ಸಿಎನ್‌ಸಿ ವತಿಯಿಂದ ಭಾಗಮಂಡಲದಲ್ಲಿ 23ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಎನ್.ಯು. ನಾಚಪ್ಪ, ಕಲಿಯಂಡ ಮೀನಾ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಬಿ.ಎಂ. ಪಾರ್ವತಿ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಕರವಂಡ ಲವ ನಾಣಯ್ಯ, ಪಟ್ಟಮಾಡ ಕುಶ, ಮುಕ್ಕಾಟಿರ ಸುಬ್ಬಯ್ಯ ಮತ್ತಿತರರು ಇದ್ದರು.
Published on:
Copied
Follow Us
ಮಡಿಕೇರಿ:
ಇತ್ತೀಚಿನ ವರ್ಷಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನದಲ್ಲಿ ತೊಡಗಿದ್ದು, ಇವರುಗಳ ವಿರುದ್ಧ ಕೊಡವರು ಜಾಗೃತರಾಗಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಹೇಳಿದರು. ಸಿಎನ್‌ಸಿ ವತಿಯಿಂದ ಭಾಗಮಂಡಲದಲ್ಲಿ ಗುರುವಾರ ನಡೆದ 23ನೇ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 40 ವರ್ಷಗಳಿಂದ ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ವಿಶ್ವ ವಿದ್ಯಾನಿಲಯವೊಂದರ ವ್ಯಕ್ತಿಗಳಿಂದ ನಡೆಯುತ್ತಿದೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದು ಪ್ರತಿಬಿಂಬಿಸುವ ಮೂಲಕ ಕೊಡವರನ್ನು ಖಳನಾಯಕರಂತೆ ತೋರಿಸುವ ಕ್ರೂರ ಹುನ್ನಾರ ಮುಂದುವರೆದಿದೆ. ದುರುಳ ಚರಿತ್ರೆಯನ್ನೇ ಕೊಡವರ ಕುರಿತಾದ ಅಧಿಕೃತ ಚರಿತ್ರೆ ಎಂದು ಬಿಂಬಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಪತ್ರಗಾರ ಹಾಗೂ ಪ್ರಾಚ್ಯ ದಾಖಲೆ ಇಲಾಖೆಗೆ ತುರಕಲಾಗುತ್ತಿದೆ. ಈ ತಪ್ಪು ಮಾಹಿತಿಯ ಆಧಾರದಲ್ಲಿ ಕಂದಾಯ ಮಂತ್ರಿಗಳು ಇತ್ತೀಚೆಗೆ ಜಮ್ಮಾ ಮಸೂದೆ ಸಂಬAಧ ತಪ್ಪು ಹೇಳಿಕೆ ನೀಡಿದ್ದನ್ನು ಗಮನಿಸಬಹುದಾಗಿದೆ.
ಕೊಡವ ಲ್ಯಾಂಡ್‌ಗಾಗಿ ಒತ್ತಾಯಿಸಿ ಮತ್ತು ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಜನಜಾಗೃತಿ ಮೂಡಿಸಲು ಇದೇ ತಿಂಗಳಿನಿAದ ಜಿಲ್ಲೆಯಾದ್ಯಂತ ಅಭಿಯಾನ ಆರಂಭಿಸಲಾಗುವುದು. ವಿಶ್ವರಾಷ್ಟç ಸಂಸ್ಥೆಯ ಅಂತಾರಾಷ್ಟಿçÃಯ ಕಾನೂನಿನಡಿ ಆದಿಮಸಂಜಾತ (ಆನಿಮಿಸ್ಟಿಕ್) ಕೊಡವ ಸಮುದಾಯವನ್ನು ಸಂರಕ್ಷಿಸಬೇಕು. ಕೊಡವರ ಮಾತೃಭಾಷೆ ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ಕೊಡವ ತಕ್ಕನ್ನು ಆಡಳಿತಾಂಗ ಮತ್ತು ಪಠ್ಯ ಕ್ರಮದಲ್ಲಿ ಅಳವಡಿಸಬೇಕು.
2026-27ರ 16ನೇ ರಾಷ್ಟಿçÃಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್‌ಟಿ ಪಟ್ಟಿಯಲ್ಲಿ ವರ್ಗೀಕರಿಸಬೇಕು ಎಂದು ಒತ್ತಾಯಿಸಿದರು.