ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಆಲೂರು ಸಿದ್ದಾಪುರ ಮುರಾರ್ಜಿ ಶಾಲೆಯಲ್ಲಿ ನಡೆಯುತ್ತಿರುವ ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಪ್ರಕಾಶ್, ಪ್ರವೀಣ್, ಸುಜಲಾದೇವಿ, ಜಗದೀಶ್ ಮುಂತಾದವರಿದ್ದರು.
ಆಲೂರು ಸಿದ್ದಾಪುರ ಮುರಾರ್ಜಿ ಶಾಲೆಯಲ್ಲಿ ನಡೆಯುತ್ತಿರುವ ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಪ್ರಕಾಶ್, ಪ್ರವೀಣ್, ಸುಜಲಾದೇವಿ, ಜಗದೀಶ್ ಮುಂತಾದವರಿದ್ದರು.
Published on
ಶನಿವಾರಸಂತೆ: ಪ್ರೌಢಶಾಲಾ ವಿಭಾಗದ ಶನಿವಾರಸಂತೆ ವಲಯ ಮಟ್ಟದ ಕ್ರೀಡಾಕೂಟವು ಸಮಿಪದ ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ನಡೆಯಿತು.
ಶಾಲಾ ಆವರಣದಲ್ಲಿ ನಡೆದ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್, ಕ್ರೀಡಾಕೂಟವು ಗೊಂದಲ ಇಲ್ಲದೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತಹ ಕ್ರಿಡಾ ಮನೋಭಾವನೆಯಿಂದ ಸಂಪನ್ನಗೊಳ್ಳಬೇಕು ಎಂದು ಆಶಿಸಿದರು.
ಶನಿವಾರಸಂತೆ ಪ್ರೌಢಶಾಲಾ ವಿಭಾಗದ ವಲಯ ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಮಾತನಾಡಿದರು. ವಿವಿಧ ಶಾಲೆಗಳ ಮುಖ್ಯಸ್ಥರು, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು, ವಸತಿ ಶಾಲೆಯ ಪಾಲಕರ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net