ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಎಬಿವಿಪಿ ಗುರಿ

ಮಡಿಕೇರಿಯಲ್ಲಿ ನಡೆಯುತ್ತಿರುವ ದಕ್ಷಿಣ ಕರ್ನಾಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 45ನೇ ಪ್ರಾಂತ ಸಮ್ಮೇಳನದಲ್ಲಿ ಎಬಿವಿಪಿಯ ರಾಷ್ಟಿçÃಯ ಸಹ ಸಂಘಟನಾ ಕಾರ್ಯದರ್ಶಿ ಎಸ್. ಬಾಲಕೃಷ್ಣ ದೀಪ ಪ್ರಜ್ವಲನ ನೆರವೇರಿಸಿದರು. ಅರ್ಜುನ್ ದೇವಯ್ಯ,ಡಾ. ರವಿ ಮಂಡ್ಯ, ಗೋಪಿ ರಂಗಸ್ವಾಮಿ, ಹೆಚ್ ಕೆ. ಪ್ರವೀಣ್, ಮಂದಾರ ಬಾಳಗೋಡು, ಎಂ. ಈಶ್ವರ ಭಟ್, ಕೆ. ಎಸ್ ರಮೇಶ್ ಹೊಳ್ಳ ಇದ್ದರು.
ಮಡಿಕೇರಿಯಲ್ಲಿ ನಡೆಯುತ್ತಿರುವ ದಕ್ಷಿಣ ಕರ್ನಾಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 45ನೇ ಪ್ರಾಂತ ಸಮ್ಮೇಳನದಲ್ಲಿ ಎಬಿವಿಪಿಯ ರಾಷ್ಟಿçÃಯ ಸಹ ಸಂಘಟನಾ ಕಾರ್ಯದರ್ಶಿ ಎಸ್. ಬಾಲಕೃಷ್ಣ ದೀಪ ಪ್ರಜ್ವಲನ ನೆರವೇರಿಸಿದರು. ಅರ್ಜುನ್ ದೇವಯ್ಯ,ಡಾ. ರವಿ ಮಂಡ್ಯ, ಗೋಪಿ ರಂಗಸ್ವಾಮಿ, ಹೆಚ್ ಕೆ. ಪ್ರವೀಣ್, ಮಂದಾರ ಬಾಳಗೋಡು, ಎಂ. ಈಶ್ವರ ಭಟ್, ಕೆ. ಎಸ್ ರಮೇಶ್ ಹೊಳ್ಳ ಇದ್ದರು.
Published on
ಮಡಿಕೇರಿ:
ಇಂದಿನ ಎಐ ಕಾಲಘಟ್ಟದಲ್ಲೂ ಹದಿಹರೆಯದವರನ್ನು ಉತ್ತಮ ಸಂಸ್ಕಾರದ ಜತೆಗೆ ಮುಂದಕ್ಕೆ ತರುವ ಗುರಿ ಎಬಿವಿಪಿಯದ್ದಾಗಿದೆ ಎಂದು ಎಬಿವಿಪಿಯ ರಾಷ್ಟಿçÃಯ ಸಹ ಸಂಘಟನಾ ಕಾರ್ಯದರ್ಶಿ ಎಸ್. ಬಾಲಕೃಷ್ಣ ಹೇಳಿದರು. ಇಲ್ಲಿನ ಗೌಡ ಸಮಾಜ ಸಮುದಾಯ ಭವನದಲ್ಲಿ ಬುಧವಾರದಿಂದ ಆರಂಭವಾಗಿರುವ ದಕ್ಷಿಣ ಕರ್ನಾಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 45ನೇ ಪ್ರಾಂತ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಪರಿವರ್ತನೆಯ ಕಾಲಘಟ್ಟದಲ್ಲಿ ಇರುವ ಭಾರತ ಈಗ ಸುವರ್ಣ ಯುಗವನ್ನು ಅನುಭವಿಸುತ್ತಿದೆ. ಇಂಥ ಸಂದÀರ್ಭದಲ್ಲಿ ಇಲ್ಲಿ ಜೀವಿಸುತ್ತಿರುವ ಈಗಿನ ಪೀಳಿಗೆ ತುಂಬಾ ಅದೃಷ್ಟ ಮಾಡಿದೆ. ಬ್ರಿಟಿಷರ ದಾಸ್ಯದ ಸಂಕೋಲೆಯಿAದ ಬಿಡಿಸಿಕೊಳ್ಳಲು ಭಾರತೀಯರಿಗೆ ಪ್ರೇರಣೆ ನೀಡಿದ್ದು ವಂದೇ ಮಾತರಂ ಎನ್ನುವ ಮಂತ್ರ. ಈ ಗೀತೆಯೂ ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಎಲ್ಲಾ ಕಡೆಗಳಿಗೂ ಪಸರಿಸುವಂತೆ ಆಗಬೇಕು.
ಎಬಿವಿಪಿ ಸಂಘಟನೆ 1948ರಿಂದಲೇ ದೇಶ ಕಟ್ಟುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ದೇಶ ಮೊದಲು ಎನ್ನುವ ಮನೋಭಾವದಿಂದ ಎಬಿವಿಪಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಬಂದಿದೆ. . ಪ್ರತಿ ನಿತ್ಯವೂ ಹೊಸ ಹೊಸ ಕಾರ್ಯಕರ್ತರನ್ನು ಈ ಸಂಘಟನೆ ಮೂಲಕ ಹುಟ್ಟುಹಾಕಲಾಗುತ್ತಿದೆ ಎಂದರು.
ಸಮ್ಮೇಳನ ಉದ್ಘಾಟಿಸಿದ ರಾಷ್ಟ್ರೀಯ ಅಥ್ಲೀಟ್ ಚಾಂಪಿಯನ್ ತೀತಮಾಡ ಅರ್ಜುನ್ ದೇವಯ್ಯ ಮಾತನಾಡಿ ಸಾರ್ವಜನಿಕ ಜೀವನದಲ್ಲಿ ಹೇಗೆ ಇರಬೇಕು ಎನ್ನುವ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು. ಯುವ ಜನತೆಯ ಮನಸ್ಸು ಯಾವಾಗಲೂ ಗಟ್ಟಿಯಾಗಿರಬೇಕು. ಯಾವುದೇ ಕಾರಣಕ್ಕೂ ಚಂಚಲವಾಗಬಾರದು. ಮೂರನೇ ವ್ಯಕ್ತಿ ಏನೋ ಹೇಳಿದರು ಎಂದು ಗುರಿಯಿಂದ ವಿಮುಖ ಆಗಬಾರದು. ವಿದ್ಯಾರ್ಥಿ ಜೀವನದಲ್ಲಿ ತ್ಯಾಗ ಮಾಡುವುದು ರೂಢಿಸಿಕೊಂಡರೆ ಮುಂದೆ ಭವಿಷ್ಯದಲ್ಲಿ ಸಾಕಷ್ಟು ಸಾಧಿಸಬಹುದು ಎಂದು ಹೇಳಿದರು.
ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ರವಿ ಮಂಡ್ಯ ಮಾತನಾಡಿ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಹೋರಾಟ, ರಚನಾತ್ಮಕ ಕೆಲಸಗಳು, ಆಂದೋಲನಾತ್ಮಕ ಕಾರ್ಯಕ್ರಮಗಳು, ಅನೇಕ ಹೋರಾಟಗಳನ್ನು 70ನ ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಪರಿಸರಕ್ಕೆ ಪೂರಕ ಚಟುವಟಿಕೆಗಳಲ್ಲೂ ಎಬಿವಿಪಿ ಮುಂದಿದೆ. ಶೈಕ್ಷಣಿಕ ಕ್ಷೇತ್ರದ ಎಲ್ಲಾ ಆಯಾಮ ಮುಟ್ಟುವ ಕೆಲಸ ಮಾಡಲಾಗುತ್ತಿದೆ ಎಂದರು.
ಎಬಿವಿಪಿ ದಾವಣಗೆರೆ ವಿಭಾಗದ ಸಂಚಾಲಕ ಗೋಪಿ ರಂಗಸ್ವಾಮಿ, ಪ್ರಾಂತ ಕಾರ್ಯದರ್ಶಿ ಹೆಚ್ ಕೆ. ಪ್ರವೀಣ್, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮಂದಾರ ಬಾಳಗೋಡು, ಸ್ವಾಗತ ಸಮಿತಿ ಅಧ್ಯಕ್ಷ ಎಂ. ಈಶ್ವರ ಭಟ್, ಕಾರ್ಯದರ್ಶಿ ಕೆ. ಎಸ್ ರಮೇಶ್ ಹೊಳ್ಳ ವೇದಿಕೆಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net