೪೫ನೇ ಪ್ರಾಂತ ಸಮ್ಮೇಳನದ ಉದ್ಘಾಟನಾ ಸಮಾರಂಭ ೨೦೨೫ನೇ ಡಿ.೧೭ರ ಮಧ್ಯಾಹ್ನ ೧೨ ಗಂಟೆಗೆ ಜರುಗಲಿದೆ. ಈ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಜೀ, ಅರ್ಜುನ್ ದೇವಯ್ಯ ಭಾಗವಹಿಸಲಿದ್ದಾರೆ. ಡಿ.೧೯ರ ಶುಕ್ರವಾರದಂದು ನಡೆಯುವ ಯುವ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೀಡಿಯಾ ಮಾಸ್ಟರ್ಸ್ ಯುಟ್ಯೂಬ್ ಚಾನೆಲ್ ಸಂಸ್ಥಾಪಕರು ರಾಘವೇಂದ್ರ ಜೋಶಿ ಭಾಗವಹಿಸಲಿದ್ದಾರೆ. ಈ ಸಾಲಿನ ಯುವ ಪುರಸ್ಕಾರ ಪ್ರಶಸ್ತಿಯನ್ನು ಶ್ರೀ ಮನೋಜ್ ನಂದೀಶಪ್ಪ, ಸಾಮಾಜಿಕ ಸೇವಾ ಕ್ಷೇತ್ರ ಬೆಂಗಳೂರು ಇವರಿಗೆ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.