ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ.ಆರ್. ಸುಮೇಶ್, ಗ್ರಾಮ ಪಂಚಾಯತ್ ವತಿಯಿಂದಲೇ ಶಿಕ್ಷಕರನ್ನು ನೇಮಿಸಲಾಗಿದ್ದು, ಅವರ ಗೌರವಧನವನ್ನು ಪಂಚಾಯಿತಿಯಿAದ ಭರಿಸಲಾಗುತ್ತದೆ. ಕಳೆದ 3-4 ವರ್ಷಗಳಿಂದ ದಾನಿಗಳ ನೆರವಿನಿಂದ ಮುಳ್ಳುಸೋಗೆ, ಗಮನಕೊಲ್ಲಿ ಹಾಗೂ ಕೂಡ್ಲೂರು ಶಾಲೆಗಳಲ್ಲಿ ಈ ಸೌಲಭ್ಯ ನೀಡಲಾಗಿತ್ತು. ಈಗ ಗುಡ್ಡೆಹೊಸೂರು ಮಕ್ಕಳೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ದಾನಿಗಳ ನೆರವಿನಿಂದ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಪ್ರತಿಯೊಂದು ಮಗು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.