

ರೋಗ ಮುಕ್ತವಾಗಿ ಬೆಳೆದಿರುವ ಶುಂಠಿಯನ್ನು ಮಾತ್ರ ಬಿತ್ತನೆಗೆ ಉಪಯೋಗಿಸಬೇಕು. ಶುಂಠಿ ಬೆಳೆಯುವ ಪ್ರದೇಶ ನೀರು ನಿಲ್ಲದ ಹಾಗೆ ಇರಬೇಕು. ಅಂತಹ ಪ್ರದೇಶವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಶುಂಠಿಯನ್ನು ಬೀಜೋಪಚಾರÀ ಮಾಡುವಾಗ ಶುಂಠಿಯನ್ನು ಅದ್ದಿ 30 ನಿಮಿಷಗಳು ಕಡ್ಡಾಯವಾಗಿ ನೆನೆಯಲು ಬಿಡಲೇಬೇಕು. ಹೆಚ್ಚಿನ ರೈತರು ಶಿ¥s಼Áರಸ್ಸು ಮಾಡಿರುವ ಶಿಲಿಂದ್ರನಾಶಕವನ್ನು ಉಪಯೋಗಿಸುತ್ತಾರಾದರು ಶುಂಠಿಯನ್ನು ಶಿಲೀಂದ್ರನಾಶಕದ ದ್ರಾವಣದಲ್ಲಿ ಮುಳುಗಿಸಿದ ನಂತರ 5 ನಿಮಿಷದಲ್ಲೆ ಹೋರ ತೆಗೆದು, ನೆರಳಿನಲ್ಲಿ 30 ನಿಮಿಷಗಳ ಕಾಲ ಒಣಗಿಸದೆ ಬಿತ್ತನೆ ಮಾಡುತ್ತಾರೆ. ಇದು ಸರಿಯಾದ ಬೀಜೋಪಚಾರದ ಕ್ರಮವಲ್ಲ.