ಬೆಂಗಳೂರಿನ ಜೋಗಿಲ ಸಿದ್ದರಾಜು ಮತ್ತು ತಂಡದವರು ಹಾಡಿರೆ ರಾಗಗಳ ತೂಗಿರೆ ದೀಪಗಳ ಹಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುರುವೆ ನಿನ್ನ ಆಟ ಬಲ್ಲವರ‌್ಯಾರೂ, ಶಿವನೇ ನಿನ್ನ ಆಟ ಬಲ್ಲವರ‌್ಯಾರೂ, ಚೆಲ್ಲಿದರೂ ಮಲ್ಲಿಗೆಯ ಬಾನಸು ಏರಿ ಮೇಲೆ, ಮಾದಪ್ಪ ಬರುವಾಗ, ಮಾಳೆಲ್ಲಾ ಗಮ್ಮೆಂದಿತು, ಮತ್ತಿತರ ಜಾನಪದ ಗೀತೆಗಳನ್ನು ಹಾಡುವ ಮೂಲಕ ಕಲಾಪ್ರೇಮಿಗಳನ್ನು ಕುಣಿಯುವಂತೆ ಮಾಡಿದ್ದು, ವಿಶೇಷವಾಗಿತ್ತು.