ಮಡಿಕೇರಿಯಲ್ಲಿ ಮೈಸೂರಿನ ಆಧುನಿಕ ಶ್ರವಣಕುಮಾರ

ಸ್ಕೂಟರ್‌ನಲ್ಲೇ ಸುತ್ತಾಡುತ್ತಾ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ ಕೃಷ್ಣಕುಮಾರ್ ಮತ್ತು ಅವರ ತಾಯಿ ಚೂಡರತ್ನಮ್ಮ ಮಡಿಕೇರಿಗೆ ಆಗಮಿಸಿದ್ದ ಸಂದರ್ಭ
ಸ್ಕೂಟರ್‌ನಲ್ಲೇ ಸುತ್ತಾಡುತ್ತಾ ಪುಣ್ಯಕ್ಷೇತ್ರಗಳ ದರ್ಶನ ಮಾಡಿದ ಕೃಷ್ಣಕುಮಾರ್ ಮತ್ತು ಅವರ ತಾಯಿ ಚೂಡರತ್ನಮ್ಮ ಮಡಿಕೇರಿಗೆ ಆಗಮಿಸಿದ್ದ ಸಂದರ್ಭ
Published on
ಮಡಿಕೇರಿ:
ಹೆತ್ತಮ್ಮನನ್ನು ಜಗತ್ತು ಸುತ್ತಾಡಿಸಬೇಕು ಎನ್ನುವ ಉದ್ದೇಶಕ್ಕೆ ಇದ್ದ ಉದ್ಯೋಗ ಬಿಟ್ಟು ಸದಾ ಸಂಚಾರಿ ಆಗಿರುವ ಮೈಸೂರಿನ ಡಿ. ಕೃಷ್ಣಕುಮಾರ್ ಮಡಿಕೇರಿಗೆ ಬಂದಿದ್ದಾರೆ. ತಾಯಿ ಚೂಡರತ್ನಮ್ಮ ಅವರಿಗೆ ಕೊಡಗು ತೋರಿಸಲು ಆಗಮಿಸಿರುವ ಅವರು ಸೋಮವಾರ (ಜ.12) ಸಂಜೆಯಿAದ ಮಂಜಿನ ನಗರಿಯಲ್ಲಿ ಅಡ್ಡಾಡುತ್ತಾ ಇಲ್ಲಿನ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ. ಬುಧವಾರ (ಜ.14) ಬೆಳಗ್ಗೆ ಕೇರಳದ ಕಾಸರಗೋಡು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ವೃದ್ಧ ತಂದೆ-ತಾಯಿಯರನ್ನು ಹೆಗಲಿನಲ್ಲಿ ಹೊತ್ತುಕೊಂಡೇ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣಕುಮಾರನ ಕತೆ ಮಾತಾ-ಪಿತೃ ಭಕ್ತಿಯ ಸಂಕೇತವಾಗಿ ಬಳಕೆಯಲ್ಲಿದೆ. ಇದೇ ಶ್ರವಣಕುಮಾರನ ಮಾದರಿಯಲ್ಲಿ ಮೈಸೂರಿನ ಡಿ. ಕೃಷ್ಣಕುಮಾರ್ (47) ತನ್ನ ತಾಯಿ ಚೂಡರತ್ನಮ್ಮ (75) ಅವರನ್ನು ದೇಶಾದ್ಯಂತ ಕರೆದುಕೊಂಡು ಹೋಗಿ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವ ಮೂಲಕ ಅಧುನಿಕ ಶ್ರವಣಕುಮಾರ ಎಂದು ಕರೆಯಿಸಿಕೊಳ್ಳುತ್ತಿದ್ದಾರೆ. 2018ರ ಜನವರಿ 14ರಿಂದ ತಾಯಿ ಜತೆ ತಮ್ಮ ಪ್ರವಾಸ ಆರಂಭಿಸಿದ ಅವರು 5 ವರ್ಷಗಳ ಕಾಲ ಸುಮಾರು 1 ಲಕ್ಷ ಕಿಮೀಗೂ ಅಧಿಕ ದೂರವನ್ನು ಕ್ರಮಿಸಿ ಭಾರತ ಮಾತ್ರವಲ್ಲದೆ ನೇಪಾಳ, ಭೂತಾನ್, ಮಾಯನ್ಮಾರ್‌ಗೂ ಹೋಗಿ ಬಂದಿದ್ದಾರೆ.
ವಿಶೇಷ ಎಂದರೆ ಅವರು ಹೀಗೆ ಸುತ್ತಾಡಲು ಬಳಸಿಕೊಂಡಿದ್ದು ತಮ್ಮ ತಂದೆ ದಕ್ಷಿಣಾಮೂರ್ತಿ ಅವರ ಹಳೆಯ ಬಜಾಜ್ ಚೇತಕ್ ಸ್ಕೂಟರ್. ಈ ಒಂದು ಭಾವನಾತ್ಮಕ ಸಂಬAಧದಿAದಾಗಿ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ವೇಳೆ ಕೃಷ್ಣಕುಮಾರ್ ಅವರಿಗೆ ತಮ್ಮ ಜತೆ ತಂದೆಯೂ ಇದ್ದಂಥ ಅನುಭವ ಆಯಿತು ಎಂದು ಹೇಳುತ್ತಾರೆ. ತಾಯಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವುದಕ್ಕೋಸ್ಕರವೇ ಇವರು ತಾವು ಇದ್ದ ಕೆಲಸದಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಮದುವೆಯೂ ಆಗದೆ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಕೃಷ್ಣಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಮಡಿಕೇರಿ ಮೂಲಕ ತಾಯಿ ಜತೆ ತೆರಳುತ್ತಿದ್ದು ಇದೇ ಸಂದರ್ಭ ಬಳಸಿಕೊಂಡು ತಾಯಿಗೆ ಕೊಡಗಿನ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಹಾಗಾಗಿ 2 ದಿನಗಳ ಕಾಲ ಮಡಿಕೇರಿಯಲ್ಲೇ ತಂಗಿದ್ದಾರೆ. ಕೊಡಗಿಗೆ ಬರುವ ಸಂದರ್ಭ ಆಗಿರುವ ಬದಲಾವಣೆ ಎಂದರೆ ಅವರ ಹಳೆಯ ಬಜಾಜ್ ಚೇತಕ್ ಸ್ಕೂಟರ್ ಜಾಗಕ್ಕೆ ಈಗ ಹೊಸ ಬಜಾಜ್ ಚೇತಕ್ ಎಲೆಕ್ಟಿçಕ್ ಸ್ಕೂಟರ್ ಬಂದಿದೆ. ಕೃಷ್ಣಕುಮಾರ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಬಜಾಜ್ ಸಂಸ್ಥೆಯವರು ಉಚಿತವಾಗಿ ಈ ಸ್ಕೂಟರ್ ಕೊಟ್ಟಿದ್ದಾರೆ.
ಸ್ಕೂಟರ್‌ನಲ್ಲಿ ದೇಶ ವಿದೇಶ ಸುತ್ತಿದ ಈ ತಾಯಿ-ಮಗನ ಜೋಡಿ ಹಲವು ಅನುಭವಗಳನ್ನೂ ಜತೆಯಲ್ಲಿ ಕಟ್ಟಿಕೊಂಡಿದ್ದಾರೆ. ಪ್ರವಾಸ ತೆರಳುವವರಿಗೆ ಇವರ ಸಿದ್ಧತೆ ಮತ್ತು ಶಿಸ್ತುಪಾಲನೆ ಮಾದರಿಯೂ ಆಗಿದೆ. ಲಕ್ಷಕ್ಕೂ ಅಧಿಕ ಕಿಮೀ ದೂರವನ್ನು ಸ್ಕೂಟರ್‌ನಲ್ಲಿ ಸುತ್ತಾಡಿದರೂ ಇಬ್ಬರಿಗೂ ಈ ತನಕ ಬೆನ್ನು ನೋವು ಬಾಧಿಸಿಲ್ಲ. 75ರ ಚೂಡರತ್ನಮ್ಮ ಈಗಲೂ ಎಷ್ಟು ದೂರ ಬೇಕಾದರೂ ಸ್ಕೂಟರ್ ಪ್ರಯಾಣಕ್ಕೆ ಸಿದ್ಧರಾಗಿ ಇರುತ್ತಾರೆ. ಪ್ರವಾಸದ ಸಂದರ್ಭ ಎಲ್ಲಿಯೂ ಕಾಫಿ, ಟೀ ಕುಡಿಯುವುದಿಲ್ಲ. ಹೊಟೇಲ್ ಊಟ ಸೇವಿಸುವುದಿಲ್ಲ.
ಸರಳವಾಗಿ ಬದುಕಲು ಬೇಕಾದಷ್ಟು ಸಂಪತ್ತು ಇಟ್ಟುಕೊಂಡಿರುವ ಕೃಷ್ಣಕುಮಾರ್ ಅದರಲ್ಲಿ ಬರುವ ಬಡ್ಡಿ ಹಣವನ್ನು ದೇಶ ಸುತ್ತಲು ಬಳಸಿಕೊಳ್ಳುತ್ತಾರೆ. ಧರ್ಮಛತ್ರ, ಸ್ನೇಹಿತರ ಮನೆಗಳಲ್ಲಿ ತಂಗುತ್ತಾರೆ. ಊಟದ ವ್ಯವಸ್ಥೆಯೂ ಅಂಥ ಜಾಗಗಳಲ್ಲೇ ಆಗುತ್ತದೆ. ಉತ್ತರ ಭಾರತ ಪ್ರವಾಸ ಸಂದರ್ಭ ಸಾಕಷ್ಟು ಮಂದಿ ಇವರನ್ನು ಕರೆದು ಸತ್ಕರಿಸಿ ಕಳಿಸಿದ್ದಾರೆ. ಅತಿಥಿ ದೇವೋಭವ ಎನ್ನುವ ಭಾರತೀಯರ ನಂಬಿಕೆ ತಮ್ಮನ್ನು ಇಷ್ಟು ದೂರ ಯಾವುದೇ ಸಮಸ್ಯೆ ಇಲ್ಲದೆ ಸುತ್ತಾಡಲು ಸಹಕರಿಸಿದೆ ಎಂದು ನೆನಪಿಸಿಕೊಳ್ಳುತ್ತಾರೆ ಚೂಡರತ್ನಮ್ಮ.
ಈ ತಾಯಿ-ಮಗ ಯಾವುದೇ ಊರಿಗೆ ಭೇಟಿ ನೀಡಿದರೂ ಅದು ಕಾಟಾಚಾರದ ಭೇಟಿ ಆಗಿರುವುದಿಲ್ಲ. ಅಥವಾ ಇಂಥ ಊರಿಗೆ ಹೋಗಿದ್ದೆ ಎನ್ನುವುದನ್ನು ತೋರಿಸಿಕೊಳ್ಳುವುದಕ್ಕೆ ಮಾತ್ರ ಇರುವುದಿಲ್ಲ. ಆ ಸ್ಥಳದ ಸೊಬಗನ್ನು ಸಂಪೂರ್ಣವಾಗಿ ಅನುಭವಿಸಿಯೇ ಮುಂದಿನ ಊರಿಗೆ ತೆರಳುತ್ತಾರೆ. ಸ್ಕೂಟರ್ ಅನ್ನು 30 ಕಿಮೀಗಿಂತ ಜಾಸ್ತಿ ವೇಗದಲ್ಲಿ ಓಡಿಸುವುದಿಲ್ಲ. ನಿಧಾನವಾಗಿ ಚಾಲಿಸುತ್ತಲೇ ರಸ್ತೆ ಅಕ್ಕಪಕ್ಕದ ಸೌಂದರ್ಯವನ್ನು ತಾವು ನೋಡುವುದಲ್ಲದೆ ತಾಯಿಗೂ ಕಣ್ತುಂಬಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ಬದುಕಿರುವಷ್ಟೂ ಕಾಲವೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ಕೃಷ್ಣಕುಮಾರ್ ಸಂಕಲ್ಪ. ಅದಕ್ಕಾಗಿ ಏನು ಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ಹಾಗೇ ಕೇರಳ ಕಡೆಗೆ ಬುಧವಾರ (ಜ.14) ಮುಂದಿನ ಪಯಣ ಬೆಳೆಸಿದ್ದಾರೆ.
ಡಿ. ಕೃಷ್ಣಕುಮಾರ್ ಮಡಿಕೇರಿಗೆ ಆಗಮಿಸಿರುವ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು. ತಾಯಿ ಮತ್ತು ಮಗನ ಅನುಭವ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಇದೇ ಸಂದರ್ಭ ರೋಟರಿ ಸದಸ್ಯರು ಸಂಗ್ರಹಿಸಿದ ಸುಮಾರು 8 ಸಾವಿರ ರೂ.ಗಳನ್ನು ಡಿ. ಕೃಷ್ಣಕುಮಾರ್ ಅವರಿಗೆ ಹಸ್ತಾಂತರಿಸಲು ನೋಡಿದಾಗ ಅವರ ಅದನ್ನು ನಯವಾಗಿಯೇ ನಿರಾಕರಿಸಿದರು. ಈ ಹಣವನ್ನು ನೀವೇ ಇಟ್ಟುಕೊಳ್ಳಿ. ಯಾವುದಾದರೂ ಸತ್ಕಾರ್ಯಕ್ಕೆ ಬಳಸಿಕೊಳ್ಳಿ ಎಂದು ಮನವಿ ಮಾಡುವ ಮೂಲಕ ಮಾದರಿ ನಡೆ ಪ್ರದರ್ಶಿಸಿದರು.
"

ಬದುಕಿರುವಾಗಲೇ ತಾಯಿ ಋಣ ತೀರಿಸಬೇಕು ಎನ್ನುವ ಸಂಕಲ್ಪದಿAದ ನನ್ನ ತಾಯಿ ಇಷ್ಟಪಟ್ಟಂತೆ ಸಂಪೂರ್ಣ ಭಾರತ ಪ್ರವಾಸ ಮಾಡಿಸಿದ್ದೇನೆ. ನೇಪಾಳ, ಭೂತಾನ್, ಮಾಯನ್ಮಾರ್‌ಗೂ ಹೋಗಿ ಬಂದಿದ್ದೇವೆ. ಸುಮಾರು 1 ಲಕ್ಷಕ್ಕೂ ಅಧಿಕ ಕಿಮೀ ದೂರವನ್ನು 5 ವರ್ಷಗಳ ಕಾಲ ಸ್ಕೂಟರ್‌ನಲ್ಲೇ ಸುತ್ತಾಡಿದ್ದೇವೆ. ಎಲ್ಲೂ ನಮಗೆ ಯಾವ ಸಮಸ್ಯೆಯೂ ಆಗಿಲ್ಲ. ತಾಯಿಗೆ ಭಾರತ ದರ್ಶನ ಮಾಡಿಸಿದ ತೃಪ್ತಿ ನನಗಿದೆ.

"

ನಾವು ಅವಿಭಕ್ತ ಕುಟುಂಬದಲ್ಲಿ ಇದ್ದವರು. ಹಿಂದಿಯಲ್ಲಿ 5 ಪರೀಕ್ಷೆಗಳನ್ನು ಪಾಸ್ ಮಾಡಿಕೊಂಡು ಶಿಕ್ಷಕಿಯಾಗುವ ಅರ್ಹತೆ ಪಡೆದುಕೊಂಡಿದ್ದೆ. ಆದರೂ ಹೊರಪ್ರಪಂಚವನ್ನು ನೋಡಲು ಸಾಧ್ಯವಾಗಿರಲಿಲ್ಲ. ಮಗ ಒಮ್ಮೆ ಈ ಬಗ್ಗೆ ಕೇಳಿದಾಗ ನಾನು ಬೇಲೂರು, ಹಳೆಬೀಡು ಕೂಡ ನೋಡಿಲ್ಲ ಎಂದು ಹೇಳಿಕೊಂಡಿದ್ದೆ. ಅಂದೇ ನನ್ನ ಮಗ ನನಗೆ ಭಾರತ ದರ್ಶನ ಮಾಡಿಸಲು ನಿರ್ಧರಿಸಿದ. ಆತ ಅಂದುಕೊAಡAತೆ ದೇಶದ ಬಹುತೇಕ ಪ್ರದೇಶಗಳನ್ನು ನನಗೆ ದರ್ಶನ ಮಾಡಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net