ಅರ್ಥಪೂರ್ಣವಾಗಿ ನಡೆದ ಗುರುವಂದನಾ ಕಾರ್ಯಕ್ರಮ

ಗುರುಪೂರ್ಣಿಮೆಯ ಅಂಗವಾಗಿ ಗುರು ವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಸೋಮಯ್ಯ, ಶರ್ಲಿ ಬೋಪಣ್ಣ, ಅಲಿಮಾ ಇತರರಿದ್ದರು.
ಗುರುಪೂರ್ಣಿಮೆಯ ಅಂಗವಾಗಿ ಗುರು ವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಸೋಮಯ್ಯ, ಶರ್ಲಿ ಬೋಪಣ್ಣ, ಅಲಿಮಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರ್ಥಪೂರ್ಣವಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಪೊನ್ನಂಪೇಟೆ: ಸಂಪೂರ್ಣ ಸ್ವಾಸ್ಥ್ಯ ಯೋಗ ಕೇಂದ್ರ, ಗೋಣಿಕೊಪ್ಪ ಹಾಗೂ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಗೋಣಿಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಕೆ.ಎಸ್.ರಾಮಮೂರ್ತಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಬಿ.ಎಲ್.ಯಶೋದ ಅವರನ್ನು ಸನ್ಮಾನಿಸಲಾಯಿತು.
ಸಂಪೂರ್ಣ ಸ್ವಾಸ್ಥ್ಯ ಯೋಗ ಕೇಂದ್ರದ ನಿರ್ದೇಶಕ ಕೆ.ಕೆ.ಸೋಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಶರ್ಲಿ ಬೋಪಣ್ಣ ಯೋಗಾಭ್ಯಾಸದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಗ ಅರ್ಜುನ ಪ್ರಶಸ್ತಿ ಪುರಸ್ಕೃತೆ ಪಿ.ಎಚ್.ಅಲಿಮಾ ಅವರು ಗುರು ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕುಮಾರ್ ಹಿಂದುಸ್ತಾನ್ ಇಂಡಸ್ಟ್ರೀಸ್‌ನ ಕುಮಾರ್, ಲೆಕ್ಕಪರಿಶೋಧಕರಾದ ಸುಬ್ರಹ್ಮಣ್ಯ, ಅವಿನಾಶ್ ಕುಶಾಲಪ್ಪ, ಸಂಧ್ಯಾ, ಆರತಿ, ಗಾಯತ್ರಿ ಮಂಜುನಾಥ್, ಅಶ್ವಿನಿ, ನೇತ್ರ ಸೇರಿದಂತೆ ಯೋಗ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net