ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಕಣಿವೆಯ ಎ. ಕೆ. ಬಾಯ್ಸ್ ಗೆ ಪ್ರಥಮ ಸ್ಥಾನ
ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಸೋಮವಾರ ನಡೆದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಗಮನ ಸೆಳೆದ ಆಟ
Published on:
Copied
Follow Us
ಕುಶಾಲನಗರ:
ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ಸೋಮವಾರ ನಡೆದ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಕಣಿವೆಯ ಎ. ಕೆ. ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಎಂ.ಕೆ.ಟಿ. ರಾಮನಾಥಪುರ ದ್ವೀತಿಯ, ದೀಪಕ್ ಫ್ರೆಂಡ್ಸ್ ಬ್ಯಾಡಗೊಟ್ಟ ತೃತೀಯ ಹಾಗೂ ಶನಿವಾರಸಂತೆ ತಂಡ ಚತುರ್ಥ ಸ್ಧಾನ ಪಡೆದುಕೊಂಡಿತು.
ಇದಕ್ಕೂ ಮೊದಲು ಮೊದಲು ಪಂದ್ಯಾವಳಿಗೆ ಚಾಲನೆ ನೀಡಿದ ಉದ್ಯಮಿ ಹಕ್ಕೆ ಮೋಹನ್ ಮಾತನಾಡಿ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಚನೆ ಮೂಲಕ ಯುವಕರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಸಹಕಾರಿಯಾಗುವುದು. ಜತೆಯಲ್ಲಿ ಒಗ್ಗೂಡಿ ಗ್ರಾಮೀಣ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅನುಕೂಲವಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ ಮಾತಾನಾಡಿ ಕ್ರೀಡೆ ದೈಹಿಕ ಮಾನಸಿಕ ಆರೋಗ್ಯ ಬೆಳವಣಿಗೆಯ ಮೂಲಕ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುವುದು ಎಂದು ಹೇಳಿದರು. ಕೆ.ಪಿ.ಸಿ.ಸಿ. ಸದಸ್ಯ ಹೆಬ್ಬಾಲೆ ನಟೇಶ್ ಗೌಡ ಮಾತಾನಾಡಿ ಯುವಕರು ಸಮಪರ್ಣಾ ಭಾವನೆಯಿಂದ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಕ್ರೀಡೆ ಸೃಜನಶೀಲತೆ ಬೆಳಸಿ ಕ್ರಿಯಾತ್ಮಕವಾಗಿ ತಾಳ್ಮೆ, ಶಾಂತಿ, ಜೀವನಕ್ಕೆ ಪಾಠ ಕಲಿಸುತ್ತದೆ ಎಂದರು.
ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಮಾಧವ, ಸಮಿತಿ ಸದಸ್ಯರು, ಕ್ರೀಡಾಪಟುಗಳು ಈ ಸಂದರ್ಭ ಇದ್ದರು.