ಮಾಲಂಬಿ-ಹೊಸಗುತ್ತಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬೀಸಿದ ಗಾಳಿಯಿಂದಾಗಿ ಗ್ರಾಮದ ಗೋಪಿನಾಥ್ ಎಂಬುವರ ಮನೆ ಪಕ್ಕದಲ್ಲಿನ ಮರ ಬಿದ್ದಿದೆ. ಇದರ ಕೊಂಬೆ ಮನೆಗೆ ತಗಲುಲಿದ್ದು, ಹೆಂಚುಗಳು ಒಡೆದು ಹಾನಿಯಾಗಿದೆ. ಮನೆಯಲ್ಲಿದ್ದ ಗೋಪಿನಾಥ್, ಪತ್ನಿ ಮತ್ತು ಇಬ್ಬರು ಪುತ್ರಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.