ಪೆರಾಜೆ ಸಂಘಕ್ಕೆ 65.3 ಲಕ್ಷ ರೂ. ಲಾಭ

ಪೆರಾಜೆ ಪ್ರಾಥಮಿಕ ಕೃಷಿಕತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿದರು. ಅಶೋಕ, ಜಯರಾಮ ನಿಡ್ಯಮಲೆ, ಸೀತಾರಾಮ ಕದಿಕಡ್ಕ ಇತರರು ಇದ್ದರು.
ಪೆರಾಜೆ ಪ್ರಾಥಮಿಕ ಕೃಷಿಕತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿದರು. ಅಶೋಕ, ಜಯರಾಮ ನಿಡ್ಯಮಲೆ, ಸೀತಾರಾಮ ಕದಿಕಡ್ಕ ಇತರರು ಇದ್ದರು.
Published on

ನಾಪೋಕ್ಲು: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025-26ನೇ ಸಾಲಿನಲ್ಲಿ 65.3 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾಹಿತಿ ನೀಡಿದರು.

ಪೆರಾಜೆ ಪ್ರಾಥಮಿಕ ಕೃಷಿಕತ್ತಿನ ಸಹಕಾರ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಸಂಘವು 71.67 ಲಕ್ಷ ರೂ. ಲಾಭ ಹೊಂದಿದ್ದು, ಈ ಪೈಕಿ ರಬ್ಬರ್ ಮಾರಾಟ ಮಾಡಿದ ಸದಸ್ಯರಿಗೆ ಕೆ.ಜಿಗೆ 1.50 ರೂ. ಪ್ರೋತ್ಸಾಹ ಧನ ಘೋಷಿಸಲಾಗಿದೆ. 65.3 ಲಕ್ಷ ರೂ. ನಿವ್ವಳ ಲಾಭದಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ, ನಿರ್ದೇಶಕರಾದ ಜಯರಾಮ ನಿಡ್ಯಮಲೆ, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ನಾರಣಪ್ಪ ಜತ್ತನ ಮನೆ, ಪ್ರಮೀಳ ಬಂಗಾರಕೋಡಿ, ಪುಷ್ಪಾವತಿ ಯಾಪಾರೆ, ಧೀನರಾಜ್ ದೊಡ್ಡಡ್ಕ, ಪ್ರದೀಪ, ಜಯರಾಮ, ಶೇಷಪ್ಪ ನಾಯ್ಕ ನಿಡ್ಯಮಲೆ, ಕಿರಣ ಬಂಗಾರಕೋಡಿ, ಕೊಡಗು ಡಿಸಿಸಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ವಿನಿತಾ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ ಹೊದ್ದೆಟ್ಟಿ, ಗೌತಮ್, ಪ್ರಮೀಳಾ ಬಂಗಾರಕೋಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net