5ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 5ನೇ ಕೊಡವ ಪುಸ್ತಕ ಪತ್ತಾಯವನ್ನು ಮಡಿಕೇರಿಯ ಕಲ್ಚರಲ್ ಆ್ಯಂಡ್ ವೆಲ್‌ಫೇರ್ ಸೆಂರ‍್ನಲ್ಲಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಉದ್ಘಾಟಿಸಿದರು. ಅಜ್ಜಿಕುಟ್ಟಿರ ಸೌಮ್ಯ ಪೊನ್ನಪ್ಪ, ಐಚಂಡ ರಶ್ಮಿ ಮೇದಪ್ಪ, ಮುಳ್ಳಂಡ ರತ್ತು ಚಂಗಪ್ಪ ಮತ್ತಿತರರು ಇದ್ದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 5ನೇ ಕೊಡವ ಪುಸ್ತಕ ಪತ್ತಾಯವನ್ನು ಮಡಿಕೇರಿಯ ಕಲ್ಚರಲ್ ಆ್ಯಂಡ್ ವೆಲ್‌ಫೇರ್ ಸೆಂರ‍್ನಲ್ಲಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಉದ್ಘಾಟಿಸಿದರು. ಅಜ್ಜಿಕುಟ್ಟಿರ ಸೌಮ್ಯ ಪೊನ್ನಪ್ಪ, ಐಚಂಡ ರಶ್ಮಿ ಮೇದಪ್ಪ, ಮುಳ್ಳಂಡ ರತ್ತು ಚಂಗಪ್ಪ ಮತ್ತಿತರರು ಇದ್ದರು.
Published on
ಮಡಿಕೇರಿ:
ಕೊಡವ ಜನಾಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬದಲಾವಣೆಗಳು ಒಂದು ಉತ್ತಮ ಬೆಳವಣಿಗೆಯಾಗಿ ಪರಿಣಮಿಸುತ್ತಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 5ನೇ ಕೊಡವ ಪುಸ್ತಕ ಪತ್ತಾಯವನ್ನು ಮಡಿಕೇರಿಯ ಕಲ್ಚರಲ್ ಆ್ಯಂಡ್ ವೆಲ್‌ಫೇರ್ ಸೆಂರ‍್ನಲ್ಲಿ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಕೊಡಗಿನಲ್ಲಿರುವ ಬಲ್ಯಮನೆಗಳು, ಸಮಾಜಗಳು, ಸಂಘ-ಸAಸ್ಥೆ ಹಾಗೂ ಅಸೋಸಿಯೇಶನ್‌ಗಳಲ್ಲಿ ಕೊಡವ ಪುಸ್ತಕ ಪತ್ತಾಯ ತೆರೆಯುಲು ಸ್ವತಃ ಮುಂದೆ ಬರುತ್ತಿರುವುದು ಜನಾಂಗದಲ್ಲಿ ಸಾಹಿತ್ಯ ಪರ ಚಿಂತನೆಯನ್ನು ತೋರ್ಪಡಿಸುತ್ತಿದೆ. ಇವೆಲ್ಲವೂ ಒಂದು ರೀತಿಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಯೋಜನೆಗಳಿಂದ ಆಗುತ್ತಿರುವ ಬದಲಾವಣೆಯಾಗಿದ್ದು, ಜನರಲ್ಲಿ ಸಾಹಿತ್ಯದತ್ತ ಒಲವು ಮೂಡಿಸಲು ಕಾರಣವಾಗಿದೆ. ನಡಿಕೇರಿಯಂಡ ಚಿಣ್ಣಪ್ಪನವರು ಬರೆದ ಪಟ್ಟೋಲೆ ಪಳಮೆ ಪುಸ್ತಕ ಸಂಸ್ಕೃತಿ, ಭಾಷೆ, ಸಾಹಿತ್ಯವನ್ನು ಹೊಂದಿರುವ ಬೃಹತ್ ಗ್ರಂಥವಾಗಿ ನಮ್ಮೊಂದಿಗೆ ಶಾಶ್ವತವಾಗಿದೆ. ಹಿಂದಿನ ಕಾಲದ ಜನರ ದೇಹವೇ ಒಂದು ಗ್ರಂಥಾಲಯವಾಗಿತ್ತು. ಅದರ ರೂಪವೇ ಈ ಪಟ್ಟೋಲೆ ಪಳಮೆಯಾಗಿದೆ. ಒಬ್ಬ ಮನುಷ್ಯನು ಪುಸ್ತಕ ಪ್ರೇಮಿಯಾಗಿದ್ದರೆ ಮಾತ್ರ ಆತನು ಬೇರೊಬ್ಬರ ಮುಂದೆ ನಿಂತು ಧೈರ್ಯದಿಂದ ಮಾತನಾಡುವ ಶಕ್ತಿ ಹೊಂದಿರುತ್ತಾನೆ. ಕೊಡವ ಸಾಹಿತ್ಯ ಅಕಾಡೆಮಿಯು ಬಹಳ ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ಸಂಸ್ಥೆಯಾಗಿರುವುದು ನಮ್ಮ ಹೆಮ್ಮೆಯಾಗಿದೆ. ಕೊಡವರಿಗಾಗಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದ, ಇದನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಅಜ್ಜಿಕುಟ್ಟಿರ ಸೌಮ್ಯ ಪೊನ್ನಪ್ಪ ಮಾತನಾಡಿ ಜನರಿಗೆ ಹಾಗೂ ಪುಸ್ತಕಾಭಿಮಾನಿಗಳಿಗೆ ಮನಮುಟ್ಟುವಂತೆ ಸಾಹಿತ್ಯವನ್ನು ಬೆಳೆಸುವ ಯೋಜನೆಯೇ ಈ ಕೊಡವ ಪುಸ್ತಕ ಪತ್ತಾಯ ಯೋಜನೆಯಾಗಿದೆ. ಸಾಹಿತ್ಯ ಎಂದರೆ ಪುಸ್ತಕವನ್ನು ಓದಿ ಜ್ಞಾನವನ್ನು ವೃದ್ದಿಸಿಕೊಳ್ಳುವಂಥದ್ದು. ಓದುಗರು ಹೆಚ್ಚಿದ್ದರೆ ಬರಹಗಾರರಿಗೆ ಇನ್ನೂ ಹೆಚ್ಚು ಬರೆಯುವ ಆಸಕ್ತಿ ಬರುತ್ತದೆ. ಪ್ರತಿ ಪುಸ್ತಕವೂ ನಮ್ಮಮಂಥವರಿಗೆ ಕಲಿಕೆಯಾಗುತ್ತದೆ. ನಮ್ಮಲ್ಲಿಯೇ ಒಬ್ಬ ಬರಹಗಾರರು ಇರುತ್ತಾರೆ, ಆದರೆ ನಮಗೆ ತಿಳಿಯುವುದಿಲ್ಲ. ಪುಸ್ತಕಗಳನ್ನು ಓದಿ ತದನಂತರ ಅದರ ಬಗ್ಗೆ ಇರುವ ಮಾಹಿತಿಯನ್ನು ಮೊಬೈಲ್ ರೀಲ್ಸ್ಗಳ ಮೂಲಕ ವಿವರಿಸುವಂತಾದರೆ ಇನ್ನೂ ಹೆಚ್ಚಿನ ಜನರಿಗೆ ನಮ್ಮ ಭಾಷೆ ತಲುಪುತ್ತದೆ. ಅಕಾಡೆಮಿ ನಡೆಸುತ್ತಿರುವ ಈ ಯೋಜನೆಯು ಬಹಳ ಉಪಯುಕ್ತವಾಗಿದೆ. ಇನ್ನೂ ಮುಂದೆಯೂ ಹೀಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಮುದ್ರಿಸಿ ಬಿಡುಗಡೆಗೊಳಿಸುವಂತಾಗಲಿ ಎಂದರು.
ಬರಹಗಾರ್ತಿ ಐಚಂಡ ರಶ್ಮಿ ಮೇದಪ್ಪ ಮಾತನಾಡಿ ಪತ್ತಾಯ ಎಂದರೆ ಸಂಗ್ರಹ ಅಥವಾ ಶೇಕರಣೆ ಎಂದು ಅರ್ಥ. ಅಕಾಡೆಮಿ ಇಂತಹ ಒಂದು ಹೊಸ ಯೋಜನೆಯನ್ನು ನಡೆಸುತ್ತಿದೆ. ಇದನ್ನು ಜ್ಞಾನ ಪತ್ತಾಯ ಎಂದೂ ಹೇಳಬಹುದು. ಇನ್ನೂ ಹೆಚ್ಚು ಅಧ್ಯಯನ ಪುಸ್ತಕಗಳನ್ನು ಹೊರತರುವಂತಾಗಬೇಕು. ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ಕೊಡವ ಭಾಷೆಯೂ ಒಂದಾಗಿದೆ. ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ನಾವು ಆದಷ್ಟು ಸಭೆ ಸಮಾರಂಭಗಳಲ್ಲಿ ಕೊಡವ ಭಾಷೆ ಮಾತನಾಡುವುದು, ಕೊಡವ ಪುಸ್ತಕ ಓದುವುದು, ಕೊಡವ ಪತ್ರಿಕೆಗಳನ್ನು ಓದುವುದು ಹೆಚ್ಚಾಗಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ಕೊಡವ ಸಮಾಜ ಕಲ್ಚರಲ್ ಮತ್ತು ಸೋಶಿಯಲ್ ವೆಲ್ಫೇರ್ ಸೆಂಟರ್ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಆಧುನಿಕತೆಯು ಮೊಬೈಲ್ ಬಳಕೆಯಿಂದ ಪುಸ್ತಕದ ಕಡೆ ತಿರುಗಿ ನೋಡದಂತಾಗಿದೆ. ಈ ಪರಿಸ್ಥಿತಿಯಲ್ಲಿ ಕೊಡವ ಅಕಾಡೆಮಿ ಮನೆ ಮನೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ನಮ್ಮ ವೆಲ್ಫೇರ್ ಸೆಂಟರ್‌ನಲ್ಲಿ ಪ್ರತ್ಯೇಕವಾದ ವಾಚನಾಲಯವನ್ನು ಈ ಮೂಲಕ ಸ್ಥಾಪಿಸಲು ಚಿಂತಿಸಲಾಗುವುದು ಎಂದರು.
ಅಕಾಡೆಮಿಯ ಸದಸ್ಯರಾದ ಕಂಬೆಯAಡ ಡೀನಾ ಬೋಜಣ್ಣ, ಕುಡಿಯಡ ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ, ನಾಪಂಡ ಗಣೇಶ್, ಪೊನ್ನಿರ ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ, ಕೊಂಡಿಜಮ್ಮನ ಬಾಲಕೃಷ್ಣ ಹಾಗೂ ಪ್ರಮುಖರಾದ ಅರೆಕಾಡು-ಹೊಸ್ಕೇರಿ ಕೊಡವ ಭವನದ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ, ಉದ್ಯಮಿ ಚೆಯ್ಯಂಡ ಸತ್ಯ ಗಣಪತಿ, ಸಾಹಿತಿ ಅಲ್ಲಾರಂಡ ವಿಟ್ಠಲ ನಂಜಪ್ಪ, ಕಲ್ಚರಲ್ ಮತ್ತು ಸೋಶಿಯಲ್ ವೆಲ್ಫೇರ್ ಸೆಂಟರ್ ಸದಸ್ಯರಾದ ಬೊಪ್ಪಂಡ ಶ್ಯಾಮ್ ಪೂಣಚ್ಚ, ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net