ಕನ್ನಂಬಾಡಮ್ಮ ದೇವಾಲಯದ 48 ದಿನಗಳ ಮಂಡಲ ಪೂಜೋತ್ಸವ

ಕನ್ನಂಬಾಡಮ್ಮ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ ದೇವಾಲಯ ಸಮಿತಿ ಪದಾಧಿಕಾರಿಗಳನ್ನು ಮುಳ್ಳುಸೋಗೆ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಎಂ. ಷಣ್ಮುಖಂ, ಎಂ.ಕೃಷ್ಣ, ಎಂ.ಕೆ.ರಾಜು, ಎಂ.ಹೆಚ್. ಅಣ್ಣೇಗೌಡ, ಎಂ.ಆರ್. ನಂಜುAಡ ಮತ್ತಿತರರು ಇದ್ದರು.
ಕನ್ನಂಬಾಡಮ್ಮ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ ದೇವಾಲಯ ಸಮಿತಿ ಪದಾಧಿಕಾರಿಗಳನ್ನು ಮುಳ್ಳುಸೋಗೆ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಎಂ. ಷಣ್ಮುಖಂ, ಎಂ.ಕೃಷ್ಣ, ಎಂ.ಕೆ.ರಾಜು, ಎಂ.ಹೆಚ್. ಅಣ್ಣೇಗೌಡ, ಎಂ.ಆರ್. ನಂಜುAಡ ಮತ್ತಿತರರು ಇದ್ದರು.
Published on
ಕುಶಾಲನಗರ:
ಇಲ್ಲಿನ ಮುಳ್ಳುಸೋಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಕನ್ನಂಬಾಡಮ್ಮ ದೇವಾಲಯದ 48 ದಿನಗಳ ಮಂಡಲ ಪೂಜೋತ್ಸವ ಮಂಗಳವಾರ ಶ್ರದ್ಧಾಭಕ್ತಿಯಿಂದ ನೆರವೇರಿತು. ಅರ್ಚಕ ಕೃಷ್ಣಮೂರ್ತಿ ಭಟ್ ಮುಂಜಾನೆಯಿAದ ದೇವಾಲಯದಲ್ಲಿ ಧಾರ್ಮಿಕ ವಿಧಿ ಪೂರೈಸಿದರು.
ಮಧ್ಯಾಹ್ನ ಕನ್ನಂಬಾಡಮ್ಮ ದೇವರ ವಿಗ್ರಹಕ್ಕೆ ವಿವಿಧ ಅಭಿಷೇಕಗಳನ್ನು ಮಾಡಿ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಪೂಜಿಸಲಾಯಿತು.
ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನೆರೆದ ಭಕ್ತ ಸಮೂಹಕ್ಕೆ ದೇವಾಲಯ ಸಮಿತಿ ವತಿಯಿಂದ ಅನ್ನದಾನ ನೆರವೇರಿತು.
ಇದೇ ಸಂದರ್ಭ ದೇವಾಲಯ ನಿರ್ಮಾಣಕ್ಕೆ ಶ್ರಮಿಸಿದ ಸಮಿತಿಯ ಪದಾಧಿಕಾರಿಗಳನ್ನು ಗ್ರಾಮಸ್ಥರ ವತಿಯಿಂದ ಎಂ. ಷಣ್ಮುಖಂ ಹಾಗೂ ಎಂ.ಕೃಷ್ಣ ಸೋದರರು ಸನ್ಮಾನಿಸಿದರು.
ಗ್ರಾಮದ ಹಿರಿಯರಾದ ಎಂ.ಕೆ.ರಾಜು, ದೇವಾಲಯ ಸಮಿತಿ ಅಧ್ಯಕ್ಷ ಎಂ.ಹೆಚ್. ಅಣ್ಣೇಗೌಡ, ಉಪಾಧ್ಯಕ್ಷ ಎಂ.ಆರ್. ನಂಜುAಡ, ಕಾರ್ಯದರ್ಶಿ ಆರ್. ಪ್ರವೀಣ್, ಖಜಾಂಚಿ ಎಂ.ವಿ. ದಾಸೇಗೌಡ, ನಿರ್ದೇಶಕರಾದ ಎಂ. ಪಳನಿಸ್ವಾಮಿ, ಎಂ.ಟಿ. ರಘು, ಎಂ.ಆರ್. ಮಹದೇವಪ್ಪ, ಎಂ.ಸಿ. ಸಂತೋಷ್, ಎಂ.ಹೆಚ್. ಚಂದ್ರಪ್ಪ, ವಿ.ಎ. ದಿನೇಶ್, ಎಂ.ಕೆ. ಚಂದ್ರು, ಎಂ.ಬಿ. ಸುರೇಶ್, ಎಂ.ಎಸ್. ಪ್ರಸನ್ನ, ರಂಗಸ್ವಾಮಿ, ದೀಪ ಹಾಗೂ ದಿವ್ಯ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net