ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಬಲಿಜ ಸಮಾಜದ ವತಿಯಿಂದ ಕುಶಾಲನಗರದ ಬಲಿಜ ಸಮಾಜದ ಆವರಣದಲ್ಲಿ ಕುಲಗುರು ಕೈವಾರ ತಾತಯ್ಯನವರ 300ನೇ ಜಯಂತಿ ಕಾರ್ಯಕ್ರಮ ನಡೆಯಿತು. ಆರ್.ಸೋಮಶೇಖರ್, ಆರ್. ಬಾಬು, ಟಿ.ಎಸ್. ನಿರಂಜನ್, ಟಿ.ಆರ್. ಜಗದೀಶ್, ಸಿ.ಎನ್. ಮದನ್ ಮತ್ತಿತರರು ಇದ್ದರು.
Published on:
Copied
Follow Us
ಕುಶಾಲನಗರ:
ಮನುಷ್ಯ ತನ್ನ ಸತ್ಕಾರ್ಯಗಳ ಮೂಲಕ ಭಗವಂತನನ್ನು ಕಾಣಬೇಕು ಎಂದು ಕೈವಾರ ತಾತಯ್ಯ 300 ವರ್ಷಗಳ ಹಿಂದೆಯೇ ಸಮಾಜಕ್ಕೆ ಕರೆಕೊಟ್ಟ ಶ್ರೇಷ್ಠ ಸಂತ ಎಂದು ಕುಶಾಲನಗರ ಹಾಗೂ ಸೋಮವಾರಪೇಟೆ ಎರಡೂ ತಾಲೂಕುಗಳ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ಅಧ್ಯಕ್ಷ ಆರ್.ಸೋಮಶೇಖರ್ ಹೇಳಿದರು.
ತಾಲೂಕು ಬಲಿಜ ಸಮಾಜದ ವತಿಯಿಂದ ಮಂಗಳವಾರ ಕುಶಾಲನಗರದ ಬಲಿಜ ಸಮಾಜದ ಆವರಣದಲ್ಲಿ ಹಮ್ಮಿಕೊಂಡಿದ್ದ ಕುಲಗುರು ಕೈವಾರ ತಾತಯ್ಯನವರ 300ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈವಾರ ತಾತಯ್ಯನವರ ಭಕ್ತಿಗೆ ಮೆಚ್ಚಿದ ಭಗವಂತನು ತಾತಯ್ಯನ ಮನದೊಳಗೆ ಹೊಕ್ಕಿ ಕಾಲಜ್ಞಾನವನ್ನು ಬರೆದ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು. ಸೋಮವಾರಪೇಟೆ ಹಾಗೂ ಕುಶಾಲನಗರ ಎರಡೂ ತಾಲೂಕುಗಳ ವ್ಯಾಪ್ತಿಯಲ್ಲಿ ಬಲಿಜ ಸಮಾಜದ 200 ಕ್ಕೂ ಹೆಚ್ಚಿನ ಕುಟುಂಬಗಳಿದ್ದು ಸಮಾಜದ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಂಘ ಕಟಿಬದ್ದವಾಗಿದೆ.
ಸರ್ಕಾರವೂ ಕೂಡ ಕೊಡಗಿನಲ್ಲಿ ನಮ್ಮ ಸಮಾಜವನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕಿದೆ ಎಂದು ಇದೇ ಸಂದರ್ಭ ಒತ್ತಾಯಿಸಿದರು.
ಸಮಾಜದ ಗೌರವಾಧ್ಯಕ್ಷ ಆರ್. ಬಾಬು, ಉಪಾಧ್ಯಕ್ಷ ಟಿ.ಎಸ್. ನಿರಂಜನ್, ಟಿ.ಆರ್. ಜಗದೀಶ್, ಸಿ.ಎನ್. ಮದನ್, ಕಾರ್ಯದರ್ಶಿ ಟಿ.ಎನ್. ಜಯರಾಮ್, ಸಹ ಕಾರ್ಯದರ್ಶಿ ಸಿ. ಜಗದೀಶ್, ಖಜಾಂಚಿ ಸಂಧ್ಯಾಗಣೇಶ್ ಸೇರಿದಂತೆ ಸಮಾಜದ ಪದಾಧಿಕಾರಿಗಳು ಇದ್ದರು.
ಗಣಪತಿ ದೇವಾಲಯದ ಅರ್ಚಕ ರಾಘವೇಂದ್ರ ಭಟ್ ಪೂಜಾ ವಿಧಿ ನಡೆಸಿದರು. ಬಳಿಕ ಎಲ್ಲರಿಗೂ ಪ್ರಸಾದ, ಅನ್ನಸಂತರ್ಪಣೆ ಹಾಗೂ ಮಜ್ಜಿಕೆ ಪಾನಕ ವಿತರಿಸಲಾಯಿತು.