ವಿದ್ಯಾರ್ಥಿಗಳಿಗೆ ತರಾಸು, ಎಂ.ರಾಮಮೂರ್ತಿ ಪ್ರಶಸ್ತಿ ಪ್ರದಾನ
ತರಾಸು ಮತ್ತು ಎಂ.ರಾಮಮೂರ್ತಿ ಪ್ರಶಸ್ತಿಗೆ ಭಾಜನರಾದ ಪೊನ್ನಂಪೇಟೆಯ ಸಿಐಪಿಯು ಕಾಲೇಜಿನ ವಿದ್ಯಾರ್ಥಿಗಳು.
Published on:
Copied
Follow Us
ಪೊನ್ನಂಪೇಟೆ:ಜನ್ಮಭೂಮಿ ಸಾಂಸ್ಕೃತಿಕ ನಾಗರಿಕ ವೇದಿಕೆ ವತಿಯಿಂದ ಬೆಂಗಳೂರಿನಲ್ಲಿ ಕನ್ನಡ ಹಬ್ಬದ ಪ್ರಯುಕ್ತ 28ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು.
2022-23ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿ.ಯು. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿಹೆಚ್ಚು ಗಳಿಸಿದ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟೂಟ್ ಆಫ್ ಪಿ.ಯು.ಕಾಲೇಜಿನ ಒಟ್ಟು 29 ವಿದ್ಯಾರ್ಥಿಗಳು ತರಾಸು ಪ್ರಶಸ್ತಿಗೆ ಭಾಜನರಾದರು.
ಹಾಗೆಯೇ 2023-24ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಿಐಪಿಯು ಕಾಲೇಜಿನ ಒಟ್ಟು 35 ವಿದ್ಯಾರ್ಥಿಗಳು ಎಂ.ರಾಮಮೂರ್ತಿ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.