ಭಾಗಮಂಡಲದ ಸಮೀಪದ ಕೋರಂಗಾಲದಲ್ಲಿ ಇರುವ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ 22ನೇ ವಾರ್ಷಿಕೋತ್ಸವ ಸಮಾರಂಭವನ್ನು ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಮೇ. ಬಿ. ರಾಘವ ಉದ್ಘಾಟಿಸಿದರು. ಕೆ.ಜೆ. ದಿವಾಕರ್, ಪೆಮ್ಮುಡಿಯಂಡ ಎಂ. ಉತ್ತಪ್ಪ, ನಿಡುಬೆ ಉಲ್ಲಾಸ, ಚೀಯಕಪೂವಂಡ ತಿಲಕಮ್ಮ, ಚೀಯಕಪೂವಂಡ ಮಿಥುನ್ ಚೆಂಗಪ್ಪ ಇದ್ದರು.
Published on:
Copied
Follow Us
ಮಡಿಕೇರಿ:
ಜೀವನದಲ್ಲಿ ಯಶಸ್ಸು ಸಾಧಿಸಲು ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ. ಮೇ. ಬಿ. ರಾಘವ ಹೇಳಿದರು. ಭಾಗಮಂಡಲದ ಸಮೀಪದ ಕೋರಂಗಾಲದಲ್ಲಿ ಇರುವ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ 22ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಪೀಳಿಗೆಯೇ ನಾಳೆಯ ಭವಿಷ್ಯ ನಿರ್ಮಾಪಕರಾಗಿದ್ದಾರೆ. ಮಕ್ಕಳಿಗೆ ಕೇವಲ ಪಾಠಪುಸ್ತಕ ಜ್ಞಾನವಷ್ಟೇ ಸಾಕಾಗುವುದಿಲ್ಲ. ಜೀವನದಲ್ಲಿ ಯಶಸ್ಸು ಸಾಧಿಸಲು ಮೌಲ್ಯಾಧಾರಿತ ಶಿಕ್ಷಣವೂ ಬೇಕು ಎಂದರು.
ಭಾಗಮಂಡಲ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಜೆ. ದಿವಾಕರ್ ಮಾತನಾಡಿ ಇಂದಿನ ಯುವ ಪೀಳಿಗೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಮತ್ತು ತಂತ್ರಜ್ಞಾನವನ್ನು ಮನರಂಜನೆಗೆ ಮಾತ್ರ ಬಳಸದೆ ಜ್ಞಾನಾರ್ಜನೆಗೆ ಬಳಸಬೇಕು. ದಿನನಿತ್ಯ ಓದುವ ಅಭ್ಯಾಸ, ಪ್ರಶ್ನಿಸುವ ಮನೋಭಾವ ಹಾಗೂ ಹೊಸ ವಿಷಯಗಳನ್ನು ತಿಳಿಯುವ ಕುತೂಹಲ ವಿದ್ಯಾರ್ಥಿಗಳ ಬೆಳವಣಿಗೆಗೆ ಅಗತ್ಯ ಎಂದು ಹೇಳಿದರು.
ಪೆಮ್ಮುಡಿಯಂಡ ಎಂ. ಉತ್ತಪ್ಪ ಮಾತನಾಡಿ ಶಿಸ್ತು, ಸಮಯಪಾಲನೆ, ಹಿರಿಯರಿಗೆ ಗೌರವ ಹಾಗೂ ದೇಶಭಕ್ತಿ ಮನೋಭಾವ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಮೂಲ ಗುಣಗಳಾಗಿವೆ. ಶಿಕ್ಷಣದ ಜತೆಗೆ ಕ್ರೀಡೆ, ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸತ್ಯನಿಷ್ಠೆ, ಪರಿಶ್ರಮ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ನಿಡುಬೆ ಉಲ್ಲಾಸ, ಚೀಯಕಪೂವಂಡ ತಿಲಕಮ್ಮ, ಶಾಲಾ ಆಡಳಿತ ಮಂಡಳಿಯ ಸದಸ್ಯ ಚೀಯಕಪೂವಂಡ ಮಿಥುನ್ ಚೆಂಗಪ್ಪ, ಚೀಯಕ ಪೂವಂಡ ಸಚಿನ್ ಪೂವಯ್ಯ ವೇದಿಕೆಯಲ್ಲಿ ಇದ್ದರು.
ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಸಂಜೆ ಮಕ್ಕಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ, ಗಾಯನ, ನಾಟಕ, ಯೋಗ, ಕರಾಟೆ ಹಾಗೂ ದೇಶಭಕ್ತಿ ಬಿಂಬಿಸುವ ಪ್ರದರ್ಶನಗಳು ಗಮನ ಸೆಳೆದವು.
ಶಾಲೆಯ ಮುಖ್ಯ ಶಿಕ್ಷಕ ಚೀಯಕ್ ಪೂವಂಡ ಶ್ವೇತನ್ ಚಂಗಪ್ಪ, ಸುನಿತಾ,ಅಭಿನಯ, ಸರಿತ, ಶಿಶಿರ್ ಮುತ್ತಪ್ಪ, ರೇಷ್ಮಾ ಬೋಪಣ್ಣ, ಬಿ.ಪಿ. ಶ್ರುತಿ, ಮಣವಟ್ಟಿರ ದಯಾ ಚಿಣ್ಣಪ್ಪ, ಸಿ.ಆರ್. ಚಿತ್ರಾ, ಶೃತಿಕಿಶೋರ್, ಪೋಷಕರು, ಶಾಲಾ ಆಡಳಿತ ಮಂಡಳಿ ಸದಸ್ಯರುಮ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.